

ಕೊಪ್ಪಳ: ಮಕ್ಕಳಿಗೆ ತಾಯಿಯೇ ಮೊದಲ ಗುರುವಾರಬೇಕು. ನಮ್ಮ ಹಿರಿಯರು ಹಾಕಿಕೊಟ್ಟ ಸಂಸತಿಕ ಬಳುವಳಿಗಳನ್ನು ಮುಂದುವರೆಸಿಕೊಂಡು ಬದುಕಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಸಲಹೆ ನೀಡಿದರು.
ನಗರದ ಮಧುಶ್ರೀ ಗಾರ್ಡನ್ನಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂದ ತಾಲೂಕು ಟಕದಿಂದ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ಕಾಯಕ ತತ್ವ ಚಿಂತನೆ ವಿಶ್ವ ಮಾನ್ಯತೆ ಪಡೆದಿದೆ. ಬಣಜಿಗ ಸಮುದಾಯ ಕಾಯಕ ನಿರತವಾಗಿದ್ದು ಸಮಾಜಕ್ಕೆ, ರಾಜ್ಯಕ್ಕೆ ತನ್ನದೇ ಕೊಡುಗೆ ನೀಡಿದೆ. ಒಟ್ಟು ಏಳು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕರ್ನಾಟಕ ಏಕೀಕರಣ ಸಮಯದಲ್ಲೂ ಪ್ರಮುಖ ಪಾತ್ರವಹಿಸಿದೆ. ಕೊಪ್ಪಳಕ್ಕೆ ನನಗೂ ಅವಿನಾಭಾವ ನಂಟಿದೆ ಎಂದು ತಮ್ಮ ಅನುಭವಗಳನ್ನು ಹಾಗೂ ರಾಜಕೀಯ ಭಾಂದವ್ಯ ಬಿಚ್ಚಿಟ್ಟರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಉನ್ನತ ವ್ಯಾಸಾಂಗಕ್ಕೆ ಪ್ರೇರೇಪಿಸುತ್ತಿರುವುದು ಉತ್ತಮ ಬೆಳವಣಿಗೆ. ಬಣಜಿಗ ಸಮುದಾಯ ರಾಜ್ಯಮಟ್ಟದಲ್ಲಿ ಸಂಟಿತವಾಗಲು ಕೊಪ್ಪಳ ಮುಖಂಡರ ಕೊಡಗೆ ಅಪಾರ. ಒಗ್ಗಟ್ಟು, ಸಹಬಾಳ್ವೆಗೆ ಬಣಜಿಗರು ಹೆಸರಾಗಿದ್ದಾರೆ. ಸಮುದಾಯ ಭವನಕ್ಕೆ ಈ ವರ್ಷ ಒಂದು ಕೋಟಿ, ಮುಂದಿನ ವರ್ಷ ಒಂದು ಕೋಟಿ ರೂ. ಅನುದಾನ ಕೊಡಿಸುವೆ ಎಂದು ಭರವಸೆ ನೀಡಿದರು.
ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಬಸವೇಶ್ವರರ ಮೂರ್ತಿ ಸ್ಥಾಪನೆಗೆ ಕೊಪ್ಪಳದ ಅಗಡಿ ಸಂಗಣ್ಣ ಅವರ ಕೊಡುಗೆ ಮರೆಯುವಂತಿಲ್ಲ. ವೀರಣ್ಣ ಮತ್ತಿಕಟ್ಟಿ ಅವರು ಸಮುದಾಯ ಸಂಟಿಸಿ ರಾಜಕೀಯವಾಗಿ ಬೆಳೆಸಿದರು. ಇಳಿವಯಸ್ಸಿನಲ್ಲಿ ಅನಾರೋಗ್ಯ ನಡುವೆಯೂ ಸಮುದಾಯ ಕಾರ್ಯಕ್ರಮಕ್ಕೆ ಬಂದು ನಮಗೆಲ್ಲ ಪ್ರೇರಣೆಯಾಗಿದ್ದಾರೆಂದು ಪ್ರಶಂಸಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಣ್ಣ ಬುಳ್ಳಾ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಳ್ಳೊಳ್ಳಿ, ಬಸವರಾಜ ಕಮಲಾಪುರ, ಅಪರ್ಣಾ ಬಳ್ಳೊಳ್ಳಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹುಬ್ಬಳ್ಳಿ&ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಪ್ರಮುಖರಾದ ಅಶೋಕ ಹಂಚಲಿ, ಅಂದಪ್ಪ ಜವಳಿ, ಗವಿಸಿದ್ದಪ್ಪ ಕೊಪ್ಪಳ, ವಿಶ್ವನಾಥ ಬಳ್ಳೊಳ್ಳಿ, ಮಹಾಬಳೇಶ ವಡ್ಡಟ್ಟಿ, ಗುರುರಾಜ ಹಲಗೇರಿ, ಮಂಜುನಾಥ ಅಂಗಡಿ, ಶಾಂತೇಶ ಸಂಕ್ಲಾಪುರ, ರಾಜೇಶ ಬೆಳವಣಿಕಿ, ಅರವಿಂದ ಅಗಡಿ ಇತರರಿದ್ದರು.