ವಾಲ್ಮೀಕಿ ನಿಗಮ ಸೌಲಭ್ಯ ಕಲ್ಪಿಸಿ

Published on

ಕೊಪ್ಪಳ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿಯಾದ ಹಣ ವಶಕ್ಕೆ ಪಡೆಯಬೇಕು. ತಕ್ಷಣ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಿದ ಅರ್ಹ ಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಂಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ ತಿಳಿಸಿದರು.

ಸಮುದಾಯ ಜನರ ಜನರ ಕಲ್ಯಾಣಕ್ಕಾಗಿ ಮೀಸಲಿದ್ದ 187 ಕೋಟಿ ರೂ.ಗಳನ್ನು ಸಚಿವರು, ಅಧ್ಯಕ್ಷರು ಹಾಗೂ ಅಧಿಕಾರಿಗಳು ಲೂಟಿ ಹೊಡೆದಿದ್ದಾರೆ. ಸಾಮಾನ್ಯನೊಬ್ಬ ಯೋಜನೆಗೆ ಅರ್ಜಿ ಸಲ್ಲಿಸಿದರೆ ನೂರಾರು ದಾಖಲೆ ಕೇಳುವ ಅಧಿಕಾರಿಗಳು ನೂರಾರೂ ಕೋಟಿ ರೂ.ಗಳನ್ನು ಬೇನಾಮಿ ಖಾತೆಗೆ ವರ್ಗಾಯಿಸಿದ್ದಾರೆ. ಇದು ಸಮುದಾಯಕ್ಕೆ ಮಾಡಿದ ಮಹಾ ಮೋಸ. ಸಮುದಾಯದ ಶಾಸಕ ಬಿ.ನಾಗೇಂದ್ರ ಇಲಾಖೆ ಜವಾಬ್ದಾರಿವಹಿಸಿಕೊಂಡಾಗ ಖುಷಿ ಪಟ್ಟಿದ್ದೆವು. ಇಂದು ತಲೆ ತಗ್ಗಿಸುವಂತಾಗಿದೆ. ಸಮುದಾಯದ ಶಾಸಕರಿದ್ದರೂ ಈ ಬಗ್ಗೆ ಮಾತನಾಡುತ್ತಿಲ್ಲ. ಸ್ವಾಮೀಜಿಗಳು ಬೇರೆ ಕೆಲಸ ನಿಮಿತ್ತ ಇತ್ತ ಗಮನಹರಿಸಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತ ಸಿಎಂ ಸಿದ್ದರಾಮಯ್ಯ ಇದಕ್ಕೆ ನೇರ ಹೊಣೆ. ಈ ಬಗ್ಗೆ ಈವರೆಗೂ ಸ್ಪಷ್ಟವಾಗಿ ಮಾತನಾಡಿಲ್ಲ. ಯಾರೇ ಹಗರಣದಲ್ಲಿ ಭಾಗಿಯಾಗಿರಲಿ ಅವರಿಗೆ ಶಿೆಯಾಗಲಿ. ತಕ್ಷಣ ಲೂಟಿಯಾದ ಹಣ ವಶಕ್ಕೆ ಪಡೆಯಬೇಕು. ನಿಗಮಕ್ಕೆ ಜಿಲ್ಲಾವಾರು ವಿವಿಧ ಯೋಜನೆಗಳಿಗೆ ಸಲ್ಲಿಕೆಯಾದ ಅರ್ಜಿ ವಿಲೇವಾರಿ ಮಾಡಬೇಕು. ತಕ್ಷಣ ಈ ಬಗ್ಗೆ ಕ್ರಮವಾಗಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.

ಮಹಾಸಭಾ ಪದಾಧಿಕಾರಿಗಳಾದ ಶರಣಪ್ಪ ನಾಯಕ, ರವಿಕುಮಾರ, ಮಲ್ಲಿಕಾರ್ಜುನ ಕಲ್ಲಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net