ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Published on

ಕೊಪ್ಪಳ: 2024-25 ನೇ ಸಾಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಸಾಲ, ನೇರಸಾಲ, ಉದ್ಯಮಶೀಲತಾ, ಸ್ವಾಲಂಬಿ ಸಾರಥಿ, ಮೈಕ್ರೋ ಕ್ರೇಡಿಟ್​, ಗಂಗಾ ಕಲ್ಯಾಣ ಯೋಜನೆಗಳಿಗೆ ಸೇವಾ ಸಿಂಧು ತಂತ್ರಾಂಶ http://sevasindu.karnataka.gov.inನಲ್ಲಿ ಅಥವಾ ಕರ್ನಾಟಕ ಒನ್​, ಗ್ರಾಮ ಒನ್​ನಲ್ಲಿ ನ. 23ರೊಳಗಾಗಿ ಆನ್​ಲೈನ್​ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ನಿಗಮಗಳ ವೆಬ್​ ಸೈಟ್​ , ಕಲ್ಯಾಣ ಮಿತ್ರ ಏಕಿಕೃತ ಎಸ್​ ಸಿ, ಎಸ್​ ಟಿ ಸಹಾಯವಾಣಿ ಸಂಖ್ಯೆ& 9482300400 ಗೆ ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net