ವಿವಿ ಕೊಪ್ಪಳಕ್ಕೆ ಸ್ಥಳಾಂತರಿಸಿ

district koppal university minister shivaraj tangadagi memorandum
Published on

ಕೊಪ್ಪಳ: ವಿಶ್ವ ವಿದ್ಯಾಲಯವನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಮುಖಂಡರು ಸಚಿವ ಶಿವರಾಜ ತಂಗಡಗಿಗೆ ನಗರದ ಡಿಸಿ ಕಚೇರಿ ಮುಂದೆ ಮನವಿ ಸಲ್ಲಿಸಿದರು.

ಸದ್ಯ ಕೊಪ್ಪಳ ವಿವಿ ತಳಕಲ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ನಡೆಯುತ್ತಿದೆ. ಅಲ್ಲಿಗೆ ತೆರಳಲು ಸರಿಯಾದ ಬಸ್​ ಸೌಲಭ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಜಿಲ್ಲಾ ಕೇಂದ್ರದಿಂದ ದೂರ ಆಗಲಿದೆ. ಕೊಪ್ಪಳದಲ್ಲೇ ವಿವಿ ಇದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಥಳಾಂತರವಾಗಿಲ್ಲ. ಯಾಕೆಂದು ತಿಳಿಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಪದವಿ ಕಾಲೇಜಿನ ವಿಸ್ತರಣ ಕಟ್ಟಡ ಬೈಪಾಸ್​ಗೆ ಹೊಂದಿಕೊಂಡು ನಿರ್ಮಿಸಲಾಗಿದೆ. ಅಲ್ಲಿ ಸಾಕಷ್ಟು ಕಟ್ಟಡಗಳು ಇವೆ. ವಿವಿಯನ್ನು ಅಲ್ಲಿಗೆ ಸ್ಥಳಾಂತರಿಸಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ. ಕೊಪ್ಪಳ ಶಾಸಕ ರಾವೇಂದ್ರ ಹಿಟ್ನಾಳ ಹಿಂದೆ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಕಳೆದ ಜನೆವರಿ 26ರಂದು ನಿಮಗೆ ಸೇರಿ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಈವರೆಗೆ ಸ್ಥಳಾಂತರ ಕಾರ್ಯ ನಡೆಯುತ್ತಿಲ್ಲವೆಂದು ತಿಳಿಸಿದರು. ಕೂಡಲೇ ವಿವಿ ವರ್ಗಾವಣೆಗೆ ಆಗ್ರಹಿಸಿದರು.

ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್​.ಪೂಜಾರ, ಎಸ್​.ಬಿ.ಹಿರೇಮಠ, ಕೆ.ಬಿ.ಗೋನಾಳ, ಶಂಭುಲಿಂಗಪ್ಪ, ಬಸವರಾಜ ಶೀಲವಂತರ, ಯಲ್ಲಪ್ಪ ಬಂಡಿ, ಶಿವಪ್ಪ ಹಡಪದ, ಮುತ್ತಣ್ಣ ಕುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net