ಕನಕದಾಸ ಆದರ್ಶ ಅಳವಡಿಸಿಕೊಳ್ಳಿ

district koppal university kanakadasa jatanthi celebration
Published on

ಕೊಪ್ಪಳ: ಕನಕದಾಸರ ಆದರ್ಶ, ತತ್ವ, ಸಿದ್ಧಾಂತ, ಸಂದೇಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಹೇಳಿದರು.

ತಳಕಲ್​ ವಿವಿ ಕಚೇರಿ ಆವರಣದಲ್ಲಿ ಸೋಮವಾರ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ, ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸಮಾಜದ ಅಂಕು- ಡೊಂಕುಗಳನ್ನು ತಿದ್ದಿದ ಮಹಾನ್​ ದಾರ್ಶನಿಕ. ತಮ್ಮ ಕೀರ್ತನೆ, ಕಾವ್ಯಗಳು ಹಾಗೂ ಬದುಕಿನ ಮೂಲಕ ಜೀವಪರ ಸಂದೇಶಗಳನ್ನು ನೀಡಿದ್ದಾರೆ ಎಂದರು. ಕುಲಸಚಿವ ಪ್ರೊ.ಕೆ.ವಿ.ಪ್ರಸಾದ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ್​ ಯಳವಟ್ಟಿ, ಸಹಾಯಕ ಪ್ರಾಧ್ಯಾಪಕ ಜಡಿಯಪ್ಪ, ಪ್ರವಿಣ ಪೊಲೀಸ್​ ಪಾಟೀಲ, ಸಂತೋಷ ಕುಮಾರ, ಪಾರ್ವತಿ, ಅಯ್ಯಪ್ಪ, ಶ್ರೀಕಂತ್​, ಸುಧಾಕರ್​ ಇದ್ದರು.

ವಿವಿಧೆಡೆ ಆಚರಣೆ

ಕೊಪ್ಪಳ ನಗರದ ಬಿಜೆಪಿ ಜಿಲ್ಲಾ ಕಚೇರಿ, ಸರ್ಕಾರಿ ಪದವಿ ಕಾಲೇಜು ಸೇರಿದಂತೆ ವಿವಿಧೆಡೆ ಕನಕದಾಸ ಜಯಂತಿ ಆಚರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಪ್ರಮುಖರಾದ ಗಣೇಶ ಹೊರತಟ್ನಾಳ, ಚನ್ನಬಸವ ಗಾಳಿ, ಕನಕಮೂರ್ತಿ ಛಲವಾದಿ, ಬಸವರಾಜ ಗಾಳಿ, ಮಹೇಶ ಅಂಗಡಿ, ಮಂಜುನಾಥ ಅಂಗಡಿ, ಸುನಿಲ್​ ಹೆಸರೂರು, ಕೀರಪ್ಪ ಆರೆರ್​, ಜಯಶ್ರೀ ಗೊಂಡಬಾಳ, ದೇವರಾಜ ಹಾಲಸಮುದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net