ಲಿಪಿಕ ನೌಕರರಿಗೆ ಬುನಾದಿ ತರಬೇತಿ

district koppal training programme govt employees
Published on

ಕೊಪ್ಪಳ: ಲಿಪಕ ನೌಕರರು ಬುನಾದಿ ತರಬೇತಿ ಸದುಪಯೋಗ ಪಡೆಯಿರಿ ಎಂದು ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಸಲಹೆ ನೀಡಿದರು.

ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಲಿಪಿಕ ನೌಕರರಿಗೆ ಹಮ್ಮಿಕೊಂಡಿದ್ದ ಸಾಮಾನ್ಯ ಬುನಾದಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ನಿಮ್ಮ ಕಚೇರಿ ಕೆಲಸದಲ್ಲಿ ಸರಿಯಾಗಿ ಬಳಸಿ. ನುರಿತ ತರಬೇತುದಾರರಿಂದ ನಿಮಗೆ 42 ದಿನಗಳ ತರಬೇತಿ ನೀಡಲಾಗಿದೆ. ಸರ್ಕಾರಿ ಕಚೇರಿ ಕೆಲಸ ಸುಲಲಿತವಾಗಿ ನಡೆಯಬೇಕಾದರೆ ತರಬೇತಿ ಅವಶ್ಯ. ವಿವಿಧ ಕಚೇರಿಗಳ ಭೇಟಿ, ಪ್ರವಾಸ, ಕಚೇರಿ ಕೆಲಸಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ಅದರ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ವಾರ್ತಾಧಿಕಾರಿ ಡಾ.ಸುರೇಶ ಜಿ. ಮಾತನಾಡಿ, ವೃತ್ತಿ ಜೀವನದಲ್ಲಿ ತರಬೇತಿ ಬೇಕು. ಮೈಸೂರು ಆಡಳಿತ ತರಬೇತಿ ಸಂಸ್ಥೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ಹಮ್ಮಿಕೊಳ್ಳುತ್ತಿದೆ. ತರಬೇತಿಯಿಂದ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದರು. ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಳಿಕ ಸಾಂಸತಿಕ ಕಾರ್ಯಕ್ರಮ ಜರುಗಿದವು. ಸಂಪನ್ಮೂಲ ವ್ಯಕ್ತಿಗಳಾದ ಮೈಲಾರ ರಾವ್​ ಕುಲಕರ್ಣಿ, ಲಾಯಕ್​ ಅಲಿ, ಜಿಲ್ಲಾ ತರಬೇತಿ ಸಂಸ್ಥೆ ಸಿಬ್ಬಂದಿ ಶ್ರೀಧರ್​, ನರ್ಮದಾ, ಗಾಯಿತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net