ತರಬೇತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Published on

ಕೊಪ್ಪಳ: ಭಾರತೀಯ ಸೇನೆ/ಇತರೆ ಯುನಿಫಾಮ್​ರ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಸೇನಾ ಆಯ್ಕೆ ಪೂರ್ವ ಸಿದ್ಧತೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗೆ ಅರ್ಜಿ ಸಲ್ಲಿಕೆ ಅವಧಿ ಡಿ.20ವರೆಗೆ ವಿಸ್ತರಿಸಲಾಗಿದೆ.

ಬಾಲಕರಿಗೆ ಮಾತ್ರ ತರಬೇತಿ ಇರಲಿದೆ. ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಅ.30ಕ್ಕೆ ಅನ್ವಯಿಸುವಂತೆ ವಯಸ್ಸು ಪರಿಗಣಿಸಲಾಗುವುದು. ಕನಕಗಿರಿ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರದಲ್ಲಿ ತರಬೇತಿ ಇರಲಿದೆ. ಅರ್ಜಿ ಸಲ್ಲಿಕೆಗೆ ಡಿ.20 ಕೊನೆಯ ದಿನ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ, ಜಿಲ್ಲಾಡಳಿತ ಭವನ ಕೊಪ್ಪಳದಲ್ಲಿ ಪಡೆದು ಖುದ್ದಾಗಿ ಸಲ್ಲಿಸಬೇಕು. ಮಾಹಿಗಾಗಿ ಸಹಾಯವಾಣಿ ಸಂಖ್ಯೆ:08539-221606ಗೆ ಬೆಳಗ್ಗೆ 10.30 ರಿಂದ ಸಂಜೆ 5.30ವರಗೆ ಸಂಪರ್ಕಿಸುವಂತೆ ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net