ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ

Published on

ಕೊಪ್ಪಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್​ ದೇಶಪಾಂಡೆ ಆರ್ಸೆಟಿ ಸಂಸ್ಥೆಯಿಂದ ಡಿಸೆಂಬರ್​ ತಿಂಗಳಲ್ಲಿ ಜೆ.ಸಿ.ಬಿ ಚಾಲನಾ ತರಬೇತಿ ಮತ್ತು ಜನೆವರಿ ತಿಂಗಳಲ್ಲಿ ಟ್ರಾವೆಲ್​ ಮತ್ತು ಟೂರಿಸ್ಟ ಗೈಡ್​ ಹಾಗೂ ಫೆಬ್ರವರಿ ತಿಂಗಳಲ್ಲಿ ಮೊಬೈಲ್​ ಫೋನ್​ ರಿಪೇರಿ ಮತ್ತು ಸರ್ವಿಸಿಂಗ್​ ಉಚಿತ ತರಬೇತಿ ನೀಡುತ್ತಿದ್ದು, ಆಸಕ್ತ ಗ್ರಾಮೀಣ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದು.

ತರಬೇತಿ ಉಚಿತ ಊಟ, ವಸತಿಯೊಂದಿಗೆ ಇರಲಿದೆ. ಆಸಕ್ತರು ನ.30ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ನಿರ್ದೇಶಕರು, ಕೆನರಾ ಬ್ಯಾಂಕ್​ ದೇಶಪಾಂಡೆ, ಆರ್ಸೆಟ್​ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಅಥವಾ ಮೊ.ಸಂ: 821736973, 9483485489, 9482188780 ಗೆ ಸಂಪರ್ಕಿಸುವಂತೆ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net