ಕೊಪ್ಪಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಿದ ರೆಫ್ರಿಜರೇಷನ್ ಮತ್ತು ಏರ್ ಕಂಡೀಶನಿಂಗ್ ಉಚಿತ ತರಬೇತಿಗೆ ಆಸಕ್ತಿರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೇ 26ರಿಂದ 30 ದಿನಗಳ ತರಬೇತಿ ಇರಲಿದೆ. ಮೊದಲು ಬಂದವರಿಗೆ ಆದ್ಯತೆ. ತರಬೇತಿಯಲ್ಲಿ ಕೌಶಲ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರ್ಕಾರಿ ಯೋಜನೆಗಳ ಮತ್ತು ಯೋಜನಾ ವರದಿ ತಯಾರಿಕೆ ಮಾಹಿತಿ ನೀಡಲಾಗುವುದು. ಹೆಸರು ನೋಂದಣಿಗೆ ಮೇ 20 ಕೊನೆಯ ದಿನ. ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ, ಆರ್ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಅಥವಾ ಮೊ.ಸಂ: 9980510717, 9483485489ಗೆ ಸಂಪರ್ಕಿಸಲು ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.