ಹಿಟ್ನಾಳ್ ಬಳಿ ರೈಲು ಡಿಕ್ಕಿಯಾಗಿ ನೂರಕ್ಕು ಹೆಚ್ಚು ಕುರಿ ಸಾವು

train accident sheeps died hitnal village koppal
Published on

ಕೊಪ್ಪಳ: ತಾಲೂಕಿನ ಹಿಟ್ನಾಳ್​ ಗ್ರಾಮದ ಬಳಿ ರೈಲು ಡಿಕ್ಕಿಯಾಗಿ 120ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.

ಮಧ್ಯಾಹ್ನ ವೇಳೆ ವಾಸ್ಕೋದಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಅಮರಾವತಿ ಎಕ್ಸ್​ಪ್ರೆಸ್​ ರೈಲು ಹಿಟ್ನಾಳ್​ ಬಳಿ ಆಗಮಿಸುತ್ತಲೇ ನೂರಾರು ಕುರಿಗಳು ಹಳಿಗೆ ಬಂದಿವೆ. ಗಾಡಿ ವೇಗವಾಗಿ ಚಲಿಸುತ್ತಿದ್ದರಿಂದ ಅಡ್ಡ ಬಂದ 120ಕ್ಕೂ ಹೆಚ್ಚು ಕುರಿಗಳು ರೈಲಿಗೆ ಸಿಕ್ಕಿ ಸಾವನ್ನಪ್ಪಿವೆ.

ಗುದ್ದಿದ ರಭಸಕ್ಕೆ ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹಳಿ ರಕ್ತಸಿಕ್ತವಾಯಿತು. ಬೆಳಗಾವಿ ಮೂಲದ ಕುರಿಗಾರರಿಗೆ ಸೇರಿದ ಕುರಿಗಳಾಗಿವೆ. ಹಳಿಗೆ ಅಡ್ಡಬಂದು ರೈಲು ಸಂಚಾರಕ್ಕೆ ತೊಂದರೆ ಮಾಡಿದ್ದಕ್ಕೆ ಹೆದರಿದ ಕುರಿಗಾರರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಮುನಿರಾಬಾದ್​ ಪೊಲೀಸ್​ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net