ಟ್ರ್ಯಾಕ್ಟರ್​ ಕಳ್ಳರ ಬಂಧನ

Published on

ಕೊಪ್ಪಳ: ತಾಲೂಕಿನ ಬಸಾಪುರದಲ್ಲಿ ಟ್ರ್ಯಾಕ್ಟರ್ ಕದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಎರಡು ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್​ ಮತ್ತು ಟ್ರಾಲಿ ವಶಕ್ಕೆ ಪಡೆದಿದ್ದಾರೆ.

ರಾಮಪ್ಪ ಗೊಂದಿ ಹೊಸಳ್ಳಿ ಎಂಬುವವರ ಮನೆ ಮುಂದೆ ನಿಲ್ಲಿಸಿದ ಮೆಸ್ಸಿ ಟ್ರ್ಯಾಕ್ಟರ್​ ಮತ್ತು ಟ್ರಾಲಿಯನ್ನು ಅ.21ರಂದು ರಾತ್ರಿ ಕಳ್ಳರು ಕದ್ದೊಯ್ದಿದ್ದರು. ಈ ಬಗ್ಗೆ ಪ್ರಕರಣ ದಾಕಲಿಸಿಕೊಂಡ ಪೊಲೀಸರು ಬಳ್ಳಾರಿ ಜಿಲ್ಲೆಯ ತೋಲಮಡಿಯ ಉಮೇಶ ಮತ್ತು ಬಳ್ಳಾರಿ ನಗರದ ಶಿವಪ್ರಸಾದ್​ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್​ ಮತ್ತು ಟ್ರಾಲಿ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net