ಬೌದ್ಧಿಕ ಬೆಳವಣಿಗೆಗೆ ಕೂಸಿನ ಮನೆ ಆಸರೆ

Published on

ಕೊಪ್ಪಳ: ಗ್ರಾಮೀಣ ಭಾಗದ ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಕೂಸಿನ ಮನೆಗಳು ಸಹಕಾರಿಯಾಗಿವೆ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಕೂಸಿನ ಮನೆ ಆರೈಕೆದಾರರಿಗೆ ಏರ್ಪಡಿಸಿದ್ದ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಆಟದೊಂದಿಕೆ ಕಲಿಕೆ ನೀಡಲು ಕೂಸಿನ ಮನೆ ನಿರ್ಮಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ. ಮಕ್ಕಳ ಕಲಿಕೆಗೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆರೈಕೆದಾರರು ಕೂಸಿನ ಮನೆಗೆ ದಾಖಲಾಗುವ ಮಕ್ಕಳನ್ನು ಸರಿಯಾಗಿ ಆರೈಕೆ ಮಾಡಿ. ನಿಮ್ಮ ಮಕ್ಕಳಂತೆ ಅವರನ್ನು ನೋಡಿಕೊಳ್ಳಿ. ಕ್ರಮಬದ್ಧವಾಗಿ ಗುಣಮಟ್ಟದ ಆಹಾರ ನೀಡಿ. ದಾಖಲೆ ನಿರ್ವಹಿಸಿ. ಮಕ್ಕಳಿರುವುದರಿಂದ ಯಾವುದೇ ಸಣ್ಣ ಅಲಕ್ಷ$್ಯನವನ್ನೂ ಮಾಡಕೂಡದು. ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ಪರೀೆ ನಡೆಸಿ. ತೂಕ ಹಾಗು ಆರೋಗ್ಯ ಬಗ್ಗೆ ನಿಗಾವಹಿಸವಂತೆ ತಾಕೀತು ಮಾಡಿದರು.

ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಮಾತನಾಡಿ, 7 ದಿನಗಳ ಕಾಲ ತರಬೇತಿ ನೀಡಲಾಗಿದೆ. ಆರೈಕೆದಾರರು ಆಸಕ್ತಿ ವಹಿಸಿ ಕೂಸಿನ ಮನೆಗಳನ್ನು ಮಾದರಿ ಮಾಡಿ. ನಿಮ್ಮ ಪಾತ್ರ ಬಹು ಮುಖ್ಯ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಿ. ಇದರಿಂದ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಎಂದರು.

ಕೆಲ ಆರೈಕೆದಾರರು ಅನಿಸಿಕೆ ವ್ಯಕ್ತಪಡಿಸಿದರು. ಪಂಚಾಯತ್​ ರಾಜ್​ ಸಹಾಯಕ ನಿರ್ದೇಶಕ ಮಹೇಶ ಎಚ್​., ಯೋಜನಾಧಿಕಾರಿ ರಾಜೇಸಾಬ್​ ನದ್​ಾ, ವ್ಯವಸ್ಥಾಪಕ ಬಸವರಾಜ ಪಾಟೀಲ್​, ವಿಷಯ ನಿರ್ವಾಹಕ ಬಸವರಾಜ ಬಳಿಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಮಾಸ್ಟರ್​ ಟೆನರಗಳಾದ ಜಯಶ್ರೀ, ಉಷಾ, ಎಚ್​.ಎಸ್​.ಹೊನ್ನುಂಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net