ಪ್ರಾಮಾಣಿಕತೆ ಮೆರೆದ ಪ್ರವಾಸಿ ಮಿತ್ರ

district koppal tour guide honesty gavimatha
Published on

ಕೊಪ್ಪಳ: ನಗರದ ಗವಿಮಠ ಹಾಗೂ ಅಶೋಕ ಶಿಲಾ ಶಾಸನ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಮರೆತು ಬಿಟ್ಟು ಹೋಗಿದ್ದ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಅವರಿಗೆ ಗುರುವಾರ ಮರಳಿಸುವ ಮೂಲಕ ಪ್ರವಾಸಿ ಮಿತ್ರ ಆನಂದ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಗದಗ ಜಿಲ್ಲೆಯ ಅಣ್ಣಿಗೇರಿ ಬಳಿಯ ಕೊಂಡಿಕೊಪ್ಪದ ಕುಂಟೆಪ್ಪ ಎಂಬುವವರು ಬುಧವಾರ ಕೊಪ್ಪಳಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಗವಿಮಠ ಹಾಗೂ ಹಿಂಭಾಗದ ಶಿಲಾ ಶಾಸನ ವೀಸುವ ಭರದಲ್ಲಿ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಇಲ್ಲಿಯೇ ಬಿಟ್ಟು ತೆರಳಿದ್ದರು. ಪ್ರವಾಸಿ ಮಿತ್ರ ಕರ್ತವ್ಯದಲ್ಲಿದ್ದ ಆನಂದ್ ಕೈಗೆ ವಸ್ತುಗಳು ಸಿಕ್ಕಿವೆ. ಅವುಗಳನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡು ಮಾಲೀಕರಿಗೆ ಗುರುವಾರ ವಿತರಿಸಿ ಪ್ರಾಮಾಣಿಕತೆ ಮೆರೆದರು. ಗವಿಮಠದಲ್ಲಿ ಪೂಜ್ಯರು ಕೂಡುವ ಸ್ಥಳದಲ್ಲಿ ಅರ್ಚಕರ ಸಮಕ್ಷಮದಲ್ಲಿ ವಸ್ತುಗಳನ್ನು ವಿತರಿಸಿದರು. ಕಳೆದ ವಸ್ತುಗಳನ್ನು ಮರಳಿ ಪಡೆದಿದ್ದಕ್ಕೆ ಕುಂಟೆಪ್ಪ ಕುಟುಂಬದವರು ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net