ಹೊಸಲಿಂಗಾಪುರ ಗ್ರಾಮದಲ್ಲಿ ಮೂವರ ನಿಗೂಢ ಸಾವು

Published on

ಕೊಪ್ಪಳ: ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ಮನೆಯಲ್ಲಿಯೇ ತಾಯಿ-ಮಗಳು-ಮೊಮ್ಮಗ ಮೂವರು ನಿಗೂಢವಾಗಿ ಮೃತಪಟ್ಟಿದ್ದು ಹಲವು ಅನುಮಾನ ಹುಟ್ಟಿಸಿದೆ. ಸಾವಿಗೆ ನಿಖರ ಕಾರಣವೇನೆಂಬುದು ತಿಳಿದು ಬಂದಿಲ್ಲ.

ರಾಮೇಶ್ವರಿ (50), ವಸಂತಾ (32) ಹಾಗೂ ಐದು ವರ್ಷದ ಮಗು ಸಾಯಿಧರ್ಮ ತೇಜ ಮೃತರು. ಯಾದವ ಕುಟುಂಬದವರಾಗಿದ್ದು, ಸಂಬಂಧಿಗಳಾಗಿದ್ದಾರೆ. ತಾಯಿ, ಮಗಳು, ಮೊಮ್ಮಗ ಏಕಕಾಲಕ್ಕೆ ಶವವಾಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಗ್ರಾಮದ ಆಶ್ರಯ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ಕೆಲ ತಿಂಗಳಿಂದ ವಾಸವಾಗಿದ್ದರು. ಮೂವರೇ ಇದ್ದರೆನ್ನಲಾಗಿದೆ. ಕೊಲೆಯೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೇ ಬೇರೆ ರೀತಿಯಲ್ಲಿ ಸಾವಾಗಿದೆಯಾ ಎಂಬ ಸ್ಪಷ್ಟತೆ ಇಲ್ಲ.

ಮಲಗಿದ ಸ್ಥಿತಿಯಲ್ಲಿಯೇ ದೇಹಗಳು ದೊರೆತಿವೆ. ವಿಷದ ಅಂಶ ಕಂಡುಬಂದರೂ ಖಚಿತಪಟ್ಟಿಲ್ಲ. ರಾಮೇಶ್ವರಿ ಕಿರಿಯ ಮಗಳು ನೀಡಿದ ದೂರಿನ ಅನ್ವಯ ಮುನಿರಾಬಾದ್​ ಠಾಣೆಯಲ್ಲಿ ಅನುಮಾನಾಸ್ಪದ ಸಾವೆಂದು ಪ್ರರಕಣ ದಾಖಲಾಗಿದ್ದು, ತನಿಖೆಯಿಂದ ನಿಖರ ಕಾರಣ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net