ಟೆಲಿಕಾಂ ಕಂಪನಿಗಳ ದರ ಏರಿಕೆ ಬೇಡ

telecom tariff escalation AIDSO organisation oppose koppal
ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್​ ರಿಚಾರ್ಜ್​ ದರ ಹೆಚ್ಚಳ ತಡೆಗೆ ಆಗ್ರಹಿಸಿ ಎಐಡಿವೈಒ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿಕ ಎಡಿಸಿ ಸಾವಿತ್ರಿ ಕಡಿಗೆ ಮನವಿ ಸಲ್ಲಿಸಿದರು. ಎಐಡಿವೈಒ ನಾಯಕರಾದ ದೇವರಾಜ್​ ಹೊಸಮನಿ, ಶರಣು ಗಡ್ಡಿ, ಮೌನೇಶ್​ ಹಲಗೇರಿ, ನಾಗರಾಜ್​, ಬಾಬಣ್ಣ ನವಲಿ ಇದ್ದರು.
Published on

ಕೊಪ್ಪಳ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್​ ರಿಚಾರ್ಜ್​ ದರ ಅನಿಯಂತ್ರಿತವಾಗಿ ಹೆಚ್ಚಳ ಮಾಡದಂತೆ ಸೂಚಿಸುವಂತೆ ಒತ್ತಾಯಿಸಿ ಎಐಡಿವೈಒ ಪದಾಧಿಕಾರಿಗಳು ಮಂಗಳವಾರ ಎಡಿಸಿ ಮೂಲಕ ಕೇಂದ್ರ ದೂರಸಂಪರ್ಕ ಹಾಗೂ ಟೆಲಿಕಾಂ ಸಚಿವ ಮತ್ತು ಟ್ರಾಯ್​ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಸರ್ಕಾರ ಎಲ್ಲ ರಂಗಗಳನ್ನು ಡಿಜಿಟಲ್​ ಮಾಡುತ್ತಿದೆ. ತರಗತಿಗಳು ಆನ್​ಲೈನ್​ನಲ್ಲಿ ನಡೆಯುತ್ತಿವೆ. ಸ್ಪಧಾತ್ಮಕ ಪರೀೆಗಳೂ ಹೊರತಾಗಿಲ್ಲ. ಸಾಮಾನ್ಯರೂ ಆನ್​ಲೈನ್​ ವಹಿವಾಟು ನಡೆಸುತ್ತಿದ್ದಾರೆ. ಎಲ್ಲ ರಂಗದ ಜನರು ಅಂತಾರ್ಜಾಲದ ಮೇಲೆ ಅವಲಂಬಿತರಾಗಿದ್ದಾರೆ. ಇಂರ್ಟನೆಟ್​, ಡೇಟಾ ರೀಚಾರ್ಜ್​ ಅನಿವಾರ್ಯವಾಗಿದೆ. ಮತ್ತೊಂದಡೆ ಬಡತನ, ನಿರುದ್ಯೋಗ ಸಮಸ್ಯೆ ಮುಂದುವರೆದಿದೆ. ಈ ಸಮಯದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ದರ ಏರಿಕೆ ಮಾಡಿರುವುದು ಸರಿಯಲ್ಲವೆಂದು ಖಂಡಿಸಿದರು.

ಗ್ರಾಹಕರದ ಹಿತದೃಷ್ಟಿಯಿಂದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಖಾಸಗಿ ಟೆಲಿಕಾಂ ಕಂಪನಿಗಳನ್ನು ನಿಯಂತ್ರಿಸಬೇಕು. ತಕ್ಷಣವೇ ಮಧ್ಯಪ್ರವೇಶಿಸಿ, ರೀಚಾರ್ಜ್​ ಮತ್ತು ಡೇಟಾ ಶುಲ್ಕಗಳಲ್ಲಿನ ಭಾರಿ ಏರಿಕೆ ತಡೆಯಬೇಕು. ನಿರ್ಧಾರದಿಂದ ಹಿಂದೆ ಸರಿಯುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಬೇಕು. ಬಿಎಸ್​ಎನ್​ಎಲ್​ ಬಲಪಡಿಸಿ ಸಂವಹನ ಸೇವೆಗಳು ಗ್ರಾಹಕರ ಕೈಗೆಟಕುವ ದರದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಐಡಿವೈಒ ನಾಯಕರಾದ ದೇವರಾಜ್​ ಹೊಸಮನಿ, ಶರಣು ಗಡ್ಡಿ, ಮೌನೇಶ್​ ಹಲಗೇರಿ, ನಾಗರಾಜ್​, ಬಾಬಣ್ಣ ನವಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net