ವಿಜಯನಗರ ಕಾಲುವೆಗಳಿಗೆ ನೀರು ಬಿಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ, ಐಸಿಸಿ ಅಧ್ಯಕ್ಷ ತಂಗಡಗಿ ಹೇಳಿಕೆ

tbdam vnc canals water relies minister shivaraj tangadgi formers demand koppal
MINISTER SHIVARAJ TANGADAGI
Published on

ಕೊಪ್ಪಳ:ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ಬೆಳೆಗಳಿಗೆ ನೀರು ಹರಿಸುವಿಕೆ ಮುಂದುವರಿಸಲಾಗುವುದಿಲ್ಲ. ವಿಜಯನಗರ ಕಾಲುವೆಗಳಿಗೆ ನೀರು ಬಿಡುವಂತೆ ರೈತರು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಡಿ.5 ಅಥವಾ 6ರಂದು ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿ ನಿರ್ಧರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ನೀರು ಲಭ್ಯವಿದ್ದರೆ ಎಲ್ಲರಿಗೂ ಕೊಡಬಹುದು. ಸದ್ಯ ಕುಡಿಯಲು ಬೇಕಾಗುವಷ್ಟು ಮಾತ್ರ ಇದೆ. ಹೀಗಾಗಿ ಬೆಳೆಗಳಿಗೆ ನೀಡುವುದು ಕಷ್ಟವಾಗುತ್ತಿದೆ. ಒಳ ಹರಿವು ನೋಡಿಕೊಂಡು ವಿಜಯನಗರ ಕಾಲುವೆಗಳಿಗೆ ನೀರು ಮುಂದುವರಿಸುವ ಬಗ್ಗೆ ತೀರ್ಮಾನಿಸಬೇಕಿದೆ.

ಆಂಧ್ರದವರಿಗೆ ತಮ್ಮ ಪಾಲಿನ ನೀರಿನಲ್ಲಿ ಒಂದೆರೆಡು ಟಿಎಂಸಿ ಬಿಟ್ಟುಕೊಡುವಂತೆ ಮನವಿ ಸಲ್ಲಿಸಿದ್ದೆವು. ಆದರೆ, ಅವರು ಒಪ್ಪಿಲ್ಲ. ಹೀಗಾಗಿ ಸಮಸ್ಯೆ ಜಟಿಲವಾಗಿದೆ. ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ತಿಳಿಸುವೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ತಮ್ಮ ಮೇಲೆ ಸುಳ್ಳು ಕೇಸ್​ ದಾಖಲಿಸಿದ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಜನಾರ್ದನ ರೆಡ್ಡಿಗೆ ಸೋನಿಯಾ ಗಾಂಧಿಯವರಾಗಲಿ, ಸಿಎಂ ಸಿದ್ದರಾಮಯ್ಯ ಆಗಲಿ ತಮ್ಮ ಬಳಿ ಬಂದು ತಲೆ ತಗ್ಗಿಸಿ ಶರಣಾಗಿ ಎಂದು ಹೇಳಿಲ್ಲ.

ಸುಮ್ಮನೆ ದೊಡ್ಡವರ ಬಗ್ಗೆ ಆರೋಪ ಮಾಡಿದರೆ ತಾವೂ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿ ರೆಡ್ಡಿ ಇದ್ದಾರೆ. ಸಚಿವ ನಾಗೇಂದ್ರ ವಿರುದ್ಧ ಗಣಿ ಹಗರಣ ಆರೋಪಗಳ ಬಗ್ಗೆ ನಮ್ಮ ಹೈಕಮಾಂಡ್​ ತಲೆ ಕೆಡಿಸಿಕೊಳ್ಳುತ್ತದೆ ಈ ಬಗ್ಗೆ ರೆಡ್ಡಿಗೆ ಚಿಂತೆ ಬೇಡವೆಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net