ಏ.10ವರೆಗೆ ಕಾಲುವೆಗಳಿಗೆ ನೀರು

district koppal tb dam munirabad water allocation
Published on

ಕೊಪ್ಪಳ: ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯದಿಂದ ಕುಡಿವ ನೀರು ಒಳಗೊಂಡು ನಿಂತ ಬೆಳೆ ರಕ್ಷಣೆಗೆ ಏ.1ರಿಂದ 10ವರೆಗೆ ನೀರು ಹರಿಸಲಾಗವುದೆಂದು ಐಸಿಸಿ ಸದಸ್ಯ ಕಾರ್ಯದರ್ಶಿ ಎಲ್​.ಬಸವರಾಜ ತಿಳಿಸಿದ್ದಾರೆ.

ಐಸಿಸಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ರ್ನಿಣಯದಂತೆ ಎಡದಂಡೆ ಮುಖ್ಯ ಕಾಲುವೆಗೆ ಏ.10ವರೆಗೆ 3 ಸಾವಿರ ಕ್ಯೂಸೆಕ್​, ಎಡದಂಡೆ ವಿಜಯನಗರ ಕಾಲುವೆಗಳಿಗೆ ಏ.11ರಿಂದ ಮೇ10ವರೆಗೆ 150 ಕ್ಯೂಸೆಕ್​ನಂತೆ ವಿತರಣಾ ಕಾಲುವೆ 1 ರಿಂದ 11ಎ ವರೆಗೆ, ಬಲದಂಡೆ ಕೆಳಮಟ್ಟದ ಕಾಲುವೆಗೆ ಏ.1ರಿಂದ ಮೇ 10ವರೆಗೆ ಕುಡಿವ ನೀರು ಒಳಗೊಂಡು ನಿಂತ ಬೆಳೆ ರಕ್ಷಣೆಗೆ 450 ಕ್ಯೂಸೆಕ್​ ಹರಿಸಲಾಗುವುದು. ರಾಯ&ಬಸವಣ್ಣ ಕಾಲುವೆಗೆ ಏ.1ರಿಂದ ಮೇ 31ವರೆಗೆ 200 ಕ್ಯೂಸೆಕ್​, ಕಾರ್ಖಾನೆಗಳು ಒಳಗೊಂಡು ನದಿಗೆ ಪೂರಕವಾಗಿ 90 ಕ್ಯೂಸೆಕ್​ ನೀರು ಒದಗಿಸಲಾಗುವುದೆಂದು ತಿಳಿಸಿದ್ದಾರೆ.

ಏ.1ಕ್ಕೆ ಜಲಾಶಯದಲ್ಲಿ ರಾಜ್ಯದ ಪಾಲು 5.565 ಟಿಎಂಸಿ ಅಡಿ ಇದ್ದು, ಕುಡಿವ ನೀರಿಗೆ 2 ಟಿಎಂಸಿ, ಬಾಕಿ 3.565 ಟಿಎಂಸಿ ಅಡಿಯಲ್ಲಿ ರಾಯ&ಬಸವ ಕಾಲುವೆಗೆ 1.517 ಟಿಎಂಸಿ, ಎಡದಂಡೆ ಹಾಗೂ ಇತರ ವಿಜಯನಗರ ಕಾಲುವೆಗಳು, ನದಿ ಪೂರಕ ಕಾರ್ಖಾನೆಗಲಿಗೆ 0.474 ಟಿಎಂಸಿ ಹರಿಸಲಾಗುವುದು. ಬಾಕಿ 1.574 ಟಿಎಂಸಿ, ಭದ್ರಾ ಜಲಾಶಯದಿಂದ 0.500 ಟಿಎಂಸಿ ಬರಲಿದೆ ಎಂದು ಅಂದಾಜಿಸಿ ಒಟ್ಟು 2 ಟಿಎಂಸಿ ನೀರು ಕುಡಿಯಲು ಬಳಸಲಾಗುವುದು. ಈ ನೀರಿನಲ್ಲಿ ಏ.1ರಿಂದ 5ವರೆಗೆ ಎಡದಂಡೆ ನಾಲೆಗೆ 3,800 ಕ್ಯೂಸೆಕ್​, ಬಲದಂಡೆ ಕೆಳಮಟ್ಟದ ಕಾಲುವೆಗೆ ಏ.1ರಿಂದ 5ವರೆಗೆ 650 ಕ್ಯೂಸೆಕ್​ ನೀರು ಒದಗಿಸಲಾಗುವುದೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net