ತುಂಗಭದ್ರಾ ಉಳಿಸಲು ಕೈ ಜೋಡಿಸಿ

Published on

ಕೊಪ್ಪಳ: ನಿರ್ಮಲ ತುಂಗಭದ್ರಾ ಅಭಿಯಾನ ಇಂದು (ಡಿ.27) ಹುಲಿಗಿ ಮೂಲಕ ಕೊಪ್ಪಳ ಪ್ರವೇಶಿಸಲಿದ್ದು, ಜಿಲ್ಲೆಯ ಜನರು ಬೆಂಬಲ ನೀಡಿ ಆಂದೋಲನ ಯಶಸ್ವಿಗೊಳಿಸುವಂತೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಅಧ್ಯಕ್ಷ ಬಸವರ್​ಆಜ ಪಾಟೀಲ್​ ವೀರಾಪುರ ಮನವಿ ಮಾಡಿದರು.

ದೇಶದ ಪ್ರಮುಖ ನದಿಗಳು ಕಲುಷಿತಗೊಳ್ಳುತ್ತಿದ್ದು ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಕುಡಿವ ನೀರಿಗೆ ನದಿ ಸೀಮಿತವಾಗಲಿದೆ. ಇಂದು ಕುಡಿಯಲು ಯೋಗ್ಯವಲ್ಲದಷ್ಟು ನೀರಿಗೆ ಮಲೀನತೆ ಸೇರುತ್ತಿದೆ. ಕೈಗಾರಿಕೆಗಳಿಂದ ಹಿಡಿದು ನಾವೆಲ್ಲರೂ ಇದಕ್ಕೆ ಕಾರಣ. ನಾವು ನಿತ್ಯ ಹೊರ ಚೆಲ್ಲವು ನೀರು ಎಲ್ಲಿ ಹೋಗಿ ಸೇರುತ್ತಿದೆ ಎಂದು ಕ್ಷಣಕಾಲ ಯೋಚಿಸಿದರೆ ಇದಕ್ಕೆ ಉತ್ತರ ಸಿಗಲಿದೆ. ತುಂಗಭದ್ರಾ ನದಿಯೂ ಕಲುಷಿತಗೊಂಡಿದ್ದು ನಿರ್ಮಲ ತುಂಗಭದ್ರಾಅಭಿಯಾನ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತ ಮುಗಿದಿದ್ದು, ಎರಡನೇ ಹಂತ ಡಿ.22ರಿಂದ ಆರಂಭವಾಗಿದೆ. ಇಂದು ಹುಲಿಗಿ ಮೂಲಕ ಕೊಪ್ಪಳ ಪ್ರವೇಶಿಸಲಿದೆ. ಸಂಸದ ರಾಜಶೇಖರ ಹಿಟ್ನಾಳ ಸೇರಿ ಇತರರನ್ನು ಒಳಗೊಂಡು ಜಾಗೃತಿ ಕಾರ್ಯಕ್ರಮ ಮಾಡುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ.30ರಂದು ಗಂಗಾವತಿಯಲ್ಲಿ ಜಲ ಜಾಗೃತಿ ಜಾಥಾ ಇರಲಿದೆ. ಬಳಿಕ ಜೂನಿಯರ್​ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ಇರಲಿದೆ. ಜಿಲ್ಲಾಳಿತ ಸೇರಿ ಎಲ್ಲರೂ ಕೈ ಜೋಡಿಸಿದ್ದಾರೆ. ಯಾತ್ರೆ ಸಾಗುವ ದಾರಿಯುದ್ದಕ್ಕೂ ಬರುವ ಗ್ರಾಪಂಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಕೈಗೊಂಡ ಯಾತ್ರೆ ಲವಾಗಿ ಹಲವು ಸುಧಾರಣಾ ಕ್ರಮಗಳು ಜರುಗುತ್ತಿವೆ. ಎರಡನೇ ಹಂತದಲ್ಲೂ ಬಯಲು ಸೀಮೆ ಜಿಲ್ಲೆಗಳ ಜನರು, ನಗರ, ಸ್ಥಳಿಯ ಸಂಸ್ಥೆಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಕೈ ಜೋಡಿಸಿ ನದಿ ಉಳಿಸಬೇಕಿದೆ ಎಂದರು.

ಸಂಚಾಲಕರಾದ ಡಾ.ಶಿವಕುಮಾರ ಮಾಲಿ ಪಾಟೀಲ್​, ಮಂಜುನಾಥ ಕಟ್ಟಿಮನಿ, ಬಸವರಾಜ ಹುಬ್ಬಳ್ಳಿ, ರಾವೇಂದ್ರ ತೂನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net