ಪೊಲೀಸರ ನಿರ್ಲಕ್ಷ್ಯದಿಂದ ಸಾವು

Published on

ಕೊಪ್ಪಳ: ನಮ್ಮ ಕುಲಬಾಂಧವರ ಜತೆ ಆಸ್ತಿ ವಿಷಯವಾಗಿ ವೈಷಮ್ಯವಿದೆ. ಇದೇ ಕಾರಣಕ್ಕೆ ತಾವರಗೇರಾದಲ್ಲಿ ಚನ್ನಪ್ಪ ನಾರಿನಾಳನನ್ನು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಮೊದಲೇ ನಾವು ಪೊಲೀಸರಿಗೆ ವಿಷಯ ತಿಳಿಸಿ ರಕ್ಷಣೆ ಕೋರಿದರೂ ಕ್ರಮವಹಿಸಲಿಲ್ಲ. ಈಗಲೂ ಆರೋಪಿಗಳ ಪೈಕಿ ಕೆಲವರನ್ನು ಬಂಧಿಸುತ್ತಿಲ್ಲವೆಂದು ಚನ್ನಪ್ಪ ಅಳಿಯ ಮಂಜುನಾಥ ಬಿಸ್ತಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆಸ್ತಿ ವಿಷಯವಾಗಿ ಮನಸ್ತಾಪ ಬಂದಿದೆ. ಮೊದಲಿನಿಂದಲೂ ಮುಂದುವರೆದಿದೆ. ಈ ಬಗ್ಗೆ ಅನೇಕ ಬಾರಿ ಪೊಲೀಸರಿಗೆ ದೂರು ನೀಡಿದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಿಗೆ ನಾವು ದೂರು ನೀಡಿದಾಗಲೊಮ್ಮೆ ಅವರಿಂದ ಪ್ರತಿದೂರು ಪಡೆದು ನಮ್ಮನ್ನು ಜೈಲಿಗೆ ಕಳುಹಿಸಿದ್ದಾರೆ. ಚನ್ನಪ್ಪನ ಕೊಲೆ ಆಗುವ ಒಂದೆರಡು ತಿಂಗಳ ಮುಂಚೆಯೇ ಬಳ್ಳಾರಿ ಐಜಿಪಿ ಹಾಗೂ ಕೊಪ್ಪಳ ಎಸ್ಪಿ ಅವರಿಗೆ ಜೀವ ಭಯ ಇರುವ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಅವರು ರ್ನಿಲಕ್ಷ$್ಯವಹಿಸಿದರು. ಆರೋಪಿಗಳು ಮೊದಲೇ ತಯಾರಿ ಮಾಡಿಕೊಂಡಂತೆ ಚನ್ನಪ್ಪನನ್ನು ಮೇ 31ರಂದು ತಾವರಗೇರಾದಲ್ಲಿ ಮಚ್ಚಿನಿಂದ ಸಾರ್ವಜನಿಕವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆಂದು ಹೇಳಿದರು.

ಕೊಲೆ ಸಂಬಂಧ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆದರೆ, ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಟನೆ ರುವಾರಿಗಳಾದ ಶಾಮಣ್ಣ ನಾರಿನಾಳ, ಗೌತಮ ಇನ್ನಿತರರನ್ನು ಬಂಧಿಸಿಲ್ಲ. ಅವರು ನಮಗೂ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ನಮಗೆ ಭಯವಾಗುತ್ತಿದೆ. ಟನೆ ನಡೆದ ದಿನ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ ಪೊಲೀಸರು ಇನ್ನೂ ಬಂಧಿಸಿಲ್ಲ. ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮಲ್ಲಿ ಇನ್ನು ಕೆಲವರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆಂದು ಅಳಲು ತೋಡಿಕೊಂಡರು.

ಮೃತ ಚನ್ನಪ್ಪನ ಸಂಬಂಧಿಗಳಾದ ಮರಿಯಪ್ಪ ಬಿಸ್ತಿ, ಮರಿಸ್ವಾಮಿ ಉರಿಜಾಳ, ವಿರೇಶ ಬಿಸ್ತಿ, ದುರುಗಪ್ಪ ನಾರಿನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net