ಈಜು ಸ್ಪರ್ಧೆಗೆ ಹೆಸರು ನೋಂದಾಯಿಸಿ

Published on

ಕೊಪ್ಪಳ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕ್ರೀಡಾ ಇಲಾಖೆಯಿಂದ ಅ.31ರಂದು ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಬೆಳಗ್ಗೆ 8 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಿದ್ದು, ಆಸಕ್ತರು ಹೆಸರು ನೋಂದಾಯಿಸಬಹುದು.

ಫ್ರೀಸ್ಟೆ$ಲ್​ ಈಜು ಪುರು, ಮಹಿಳೆಯರಿಗೆ 25 ಮೀ. ಮತ್ತು 50 ಮಿ., ಬ್ಯಾಕ್​ ಸ್ಟೋಕ್​ ಪುರುಷರಿಗೆ 25, 50 ಮೀ., ಮಹಿಳೆಯರಿಗೆ 25 ಮೀ., ಬ್ರೆಸ್ಟ್​ ಸ್ಟೋಕ್​ ಈಜು ಪುರುಷರಿಗೆ 25, 50 ಮೀ., ಮಹಿಳೆಯರಿಗೆ 25 ಮೀ., ಬಟರ್​ ್ಲೆ ಈಜು ಪುರುಷರಿಗೆ 25, 50 ಮೀ., ಮಹಿಳೆಯರಿಗೆ 25 ಮೀ. ಇರಲಿದೆ. ಭಾಗವಹಿಸಲು ಶುಲ್ಕ, ವಯೋಮಿತಿ ಇಲ್ಲ. ಸ್ಪರ್ಧಿಸುವವರು ಅ.31ರಂದು ಬೆಳಗ್ಗೆ 7 ಗಂಟೆಗೆ ಕ್ರೀಡಾಂಗಣದಲ್ಲಿರಬೇಕು. 8ಕ್ಕೆ ಸ್ಪರ್ಧೆ ಆರಂಭವಾಗಲಿದ್ದು, ಮೊದಲ ಅರ್ಧ ಗಂಟೆ ಅಭ್ಯಾಸಕ್ಕೆ ಅವಕಾಶವಿರಲಿದೆ. ಒಬ್ಬರು ಗರಿಷ್ಠ 3 ಸ್ಪರ್ಧೆಯಲ್ಲಿ ಭಾಗಿಯಾಗಬಹುದು. ವಿಜೇತರಿಗೆ ಪದಕ, ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗೆ ಮೊ.ಸಂ: 7026459937 ಹಾಗೂ 8310802801ಗೆ ಸಂಪರ್ಕಿಸುವಂತೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net