ವಿಶೇಷಚೇತನರು ಮತದಾನದಿಂದ ಹೊರಗುಳಿಯದಂತೆ ಕ್ರಮವಹಿಸಿ: ಇಒ ನಿಂಗಪ್ಪ ಎಸ್ ಮಸಳಿ

sveep activity in koppal kustagi by district administration
Published on

ಕುಷ್ಟಗಿ (ಕೊಪ್ಪಳ): ಮೇ-7ರಂದು ಜರುಗುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಜರುಗಲಿದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಹಿರಿಯ ನಾಗರೀಕರು ಹಾಗು ವಿಶೇಷಚೇತನರು ಮತದಾನದಿಂದ ಹೊರಗುಳಿಯದಂತೆ ವಿಶೇಷಚೇತನ ಕಾರ್ಯಕರ್ತರು ಕ್ರಮವಹಿಸಬೇಕೆಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ನಿಂಗಪ್ಪ ಎಸ್ ಮಸಳಿ ಕರೆ ನೀಡಿದರು.

ಕುಷ್ಟಗಿ ತಾಲೂಕ ಪಂಚಾಯತಿಯಲ್ಲಿ ಜರುಗಿದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ವಿಶೇಷಚೇತನರ ಕಾರ್ಯಕರ್ತರು ಚುನಾವಣೆ ದಿನದಂದು ವಹಿಸಬೇಕಾದ ಕ್ರಮಗಳ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.

ಸದರಿ ದಿನದಂದು ಈಗಾಗಲೇ ವಿಲ್‌ ಚೇರ್‌ ವ್ಯವಸ್ಥೆ ಕಲ್ಪಿಸಿದ್ದು ಮುಂಜಾನೆಯ ಅವಧಿಯೊಳಗಾಗಿ ಎಲ್ಲರೂ ಮತ ಚಲಾಯಿಸುವಂತೆ ಕ್ರಮವಹಿಸಬೇಕೆಂದರು. ಲೋಕಸಭಾ ಚುನಾವಣೆಯಲ್ಲಿ ಶೇ.100%ರಷ್ಟು ವಿಶೇಷಚೇತನರು ಮತದಾನ ಮಾಡುವಂತೆ ಅದರ ಪೂರ್ವಭಾವಿಯಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ಜರುಗಿಸಬೇಕೆಂದರು. ಪ್ರತಿ ಮತ ಅಮೂಲ್ಯವಾದುದು ಕುಷ್ಟಗಿ ತಾಲೂಕಿನಲ್ಲಿ ಎಲ್ಲಾ ವಿಶೇಷಚೇತನರು ಶೇ.100% ಮತ ಚಲಾಯಿಸಿ ರಾಜ್ಯಕ್ಕೆ ಉತ್ತಮ ಸಂದೇಶ ಸಾರೋಣ ಎಂದರು.

ಪ್ರತಿಜ್ಞಾ ವಿಧಿ ಸ್ವೀಕಾರ : ಸಭೆಯಲ್ಲಿ ಕುಷ್ಟಗಿ ತಾಲೂಕ ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀ ನಿಂಗನಗೌಡ ವಿ ಹೆಚ್ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ಯಲ್ಲಮ್ಮ , ತಾಲೂಕ ಪಂಚಾಯತ್ ಸಿಬ್ಬಂದಿಗಳಾದ ಸಂಗಪ್ಪ ನಂದಾಪುರ, ಚಂದ್ರಶೇಖರ್ ಜಿ ಹಿರೇಮಠ್, ತಾಲೂಕ ವಿಶೇಷಚೇತನರ ಕಾರ್ಯಕರ್ತ ಚಂದ್ರಶೇಖರ್ ಹಿರೇಮನಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ವಿಶೇಷಚೇತನರ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net