ಸೂರ್ಯಕಾಂತಿ ಖರೀದಿಗೆ ನೋಂದಣಿಗೆ ಸೂಚನೆ

Published on

ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್​ ಸೂರ್ಯಕಾಂತಿಗೆ 7721ರೂ.ನಂತೆ ಗರಿಷ್ಠ 15,650 ಮೆಟ್ರಿಕ್​ ಟನ್​ ಖರೀದಿಗೆ ಸರ್ಕಾರ ಸೂಚಿಸಿದೆ.

ಅಳವಂಡಿ, ಮಂಡಲಗೇರಿ, ಬೇವೂರು, ನಾಗನಕಲ್​ ಕೆಒಎಫ್​ ಅಡಿಯಲ್ಲಿನ ಒಜಿಸಿಎಸ್​ನಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದು. ನೋಡಲ್​ ಅಧಿಕಾರಿಯಾಗಿ ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಮೊ.ನಂ:9902224089, ಯಲಬುರ್ಗಾ ಎಪಿಎಂಸಿಯ ಕಾರ್ಯದರ್ಶಿ ಗುರುಪ್ರಸಾದ ಗುಡಿ ಮೊ.ನಂ: 9972054874, ಕಾರಟಗಿ ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಹರೀಶ ಪತ್ತಾರ ಮೊ.ನಂ: 9060893320 ಇವರನ್ನು ನೋಡಲ್​ ನೇಮಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net