ಬಂಡವಾಳಶಾಹಿಗಳ ಪಾಲಾದ ಸ್ವಾತಂತ್ರ್ಯ

district koppal suci party foundation day celebration
Published on

ಕೊಪ್ಪಳ: ನಮಗೆಲ್ಲ 1947ರಲ್ಲಿ ದೊರೆತ ಸ್ವಾತಂತ್ರ್ಯ ಇಂದು ಬಂಡವಾಳ ಶಾಹಿಗಳ ಪಾಲಾಗಿದೆ. ಇದನ್ನು ಆಗಲೇ ಶಿವದಾಸ್​ ಘೋಷ್​ ಸ್ಪಷ್ಟವಾಗಿ ಹೇಳಿದ್ದರು ಎಂದು ಎಸ್​ಯುಸಿಐ ರಾಜ್ಯ ಸಮಿತಿ ಸದಸ್ಯ ರಾಮಾಂನಪ್ಪ ಆಲ್ದಳ್ಳಿ ಹೇಳಿದರು.

ನಗರದ ಪಕ್ಷದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 78ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಒಂದು ವರ್ಗಕ್ಕೆ ಮಾತ್ರ ಸ್ವಾತಂತ್ರ್ಯ ಎಂದು ಶಿವದಾಸ ಘೋಷ್​ ಚಿಕ್ಕ ವಯಸ್ಸಿನಲ್ಲೇ ಸಾಾತ್ಕಾರ ಮಾಡಿಕೊಂಡಿದ್ದರು. ದೇಶ ಸಂಭ್ರಮದಲ್ಲಿ ಮುಳುಗಿದರೂ ಅವರು ರೈತ, ಕಾರ್ಮಿಕ ಹಾಗೂ ದುಡಿವ ಜನಗಳ ಹಿತಾಸಕ್ತಿ ಕಾಪಾಡುವ ಪಕ್ಷದ ನಿಮಾರ್ಣದಲ್ಲಿ ನಿರತರಾಗಿದ್ದರು. 1948 ಏಪ್ರಿಲ್​ 24 ರಂದು ಕೆಲವೇ ಸಂಗಾತಿಗಳ ಜತೆಗೂಡಿ ಪಕ್ಷ ಸ್ಥಾಪಿಸಿದರು. ಸ್ವಾತಂತ್ರ್ಯ ಸಾಮಾನ್ಯರ ಬದುಕು ಉತ್ತಮಗೊಳಿಸುವುದಿಲ್ಲ. ಬಡತನ, ನಿರುದ್ಯೋಗ, ಜಾತಿಯತೆ, ಧಾರ್ಮಿಕ ಸಮಸ್ಯೆಗಳು ನಿವಾರಣೆಯಗುವುದಿಲ್ಲ. ಶ್ರೀಮಂತರ ಹಿತ ಕಾಪಾಡುವ ವ್ಯವಸ್ಥೆ ಆಗುತ್ತದೆ ಎಂದಿದ್ದರು ಎಂದರು.

ಪಕ್ಷದ ಪ್ರಮುಖ ಶರಣು ಗಡ್ಡಿ ಮಾತನಾಡಿ, ಕೊಪ್ಪಳದಲ್ಲಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಮೇ 14ರಂದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ. ಕೊಪ್ಪಳದಿಂದ ಹೆಚ್ಚಿನ ಜನರು ಭಾಗವಹಿಸಬೇಕೆಂದು ಕರೆ ನೀಡಿದರು. ಪಕ್ಷದ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net