ಅತಿಥಿ ಉಪನ್ಯಾಸಕರನ್ನು ನೇಮಿಸಿ

district-koppal-students-protest-yalaburga-guestlectuer
Published on

ಕೊಪ್ಪಳ: ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಆಗ್ರಹಿಸಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಫಿತ್​ ತಾಲೂಕು ಘಟಕದ ಸಹಯೋಗದಲ್ಲಿ ವಿದ್ಯಾರ್ಥಿಗಳು ಮಳೆಯನ್ನು ಲೆಕ್ಕಿಸದೆ ಶುಕ್ರವಾರ ಪ್ರತಿಭಟನೆ ನಡೆಸಿ ತಹಸಿಲ್​ ಕಚೇರಿಯ ಗ್ರೇಡ್​-2 ತಶೀಲ್ದಾರ್​ ಮುರಳೀಧರಾವ್​ಗೆ ಮನವಿ ಸಲ್ಲಿಸಿದರು.

ಎಬಿವಿಪಿ ಬಳ್ಳಾರಿ ವಿಭಾಗದ ಸಂಚಾಲಕ ಶಶಾಂಕ ಪಾಟೀಲ್​ ಮಾತನಾಡಿ, ಕಳೆದ ಎರಡ್ಮೂರು ತಿಂಗಳಿಂದ 2025-26ನೇ ಸಾಲಿನ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡದ ಪರಿಣಾಮ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಫ್ಯಿವನ್ನು ಹಾಳು ಮಾಡುತ್ತಿದೆ. ಸಂಬಂಧಿಸಿದ ಉನ್ನತ ಶಿಕ್ಷಣ ಇಲಾಖೆ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಬೇಸರ ತರಿಸಿದೆ. ಕೂಡಲೇ ರಾಜ್ಯದ ಎಲ್ಲ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ತ್ವರಿತವಾಗಿ ನೇಮಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರಾದ ಪ್ರಶಾಂತ ನಡುಲಮನಿ, ವೀರೇಶ, ಮುತ್ತಪ್ಪ, ವಿಜಯಕುಮಾರ, ಭೀಮಪ್ಪ, ಕಲ್ಲೇಶ, ಪುನೀತ, ಅನಿಲಕುಮಾರ, ರಾಜು, ಗೋವಿಂದ, ಪೂಜಾ, ಸ್ನೇಹಾ, ಕಾವ್ಯ ಸೇರಿದಂತೆ ಇತರರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net