ಗ್ರಾಮೀಣ ಬಸ್​ ಸಮಸ್ಯೆ ಸರಿಪಡಿಸಿ

district koppal students bus problem protest
Published on

ಕೊಪ್ಪಳ: ಹುಲಿಗಿ, ಹೊಸಲಿಂಗಾರಪು, ಹೊಸಳ್ಳಿಯಿಂದ ಮುನಿರಾಬಾದ್​ಗೆ ತೆರಳಲು ಸಾರಿಗೆ ಬಸ್​ ಸಮಸ್ಯೆ ಎದುರಾಗಿದ್ದು ಸರಿಪಡಿಸಲು ಆಗ್ರಹಿಸಿ ಎಐಡಿಎಸ್​ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಮುನಿರಾಬಾದ್​ನಲ್ಲಿ ಪ್ರತಿಭಟನೆ ನಡೆಸಿದರು.

ಎಐಡಿಎಸ್​ಓ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿವೆ. ಹುಲಿಗಿ, ಹೊಸ ಲಿಂಗಾಪುರ, ಹೊಸಳ್ಳಿ ಸೇರಿ ವಿವಿಧ ಗ್ರಾಮಗಳಿಂದ ಬರುವ ಬಸ್​ಗಳು ಮುನಿರಾಬಾದ್​ಗೆ ತೆರಳುವುದು ನಿಂತಿದೆ. ಬಸ್​ಗಳು ಗ್ರಾಮದ ಒಳಗೆ ಬರದೇ ಎನ್​ಎಚ್​ ಮೂಲಕವೇ ಹೋಗುತ್ತಿವೆ. ವಿವಿಧ ಗ್ರಾಮಗಳಿಂದ ಮುನಿರಾಬಾದ್​ಗೆ ಬರುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. 3 ಕಿ.ಮೀ. ದೂರದಲ್ಲಿ ಬಸ್​ ನಿಲ್ಲಿಸುತ್ತಿದ್ದು, ಅಲ್ಲಿಂದ ನಡೆದುಕೊಂಡು ಮುನಿರಾಬಾದ್​ಗೆ ಬರುವಂತಾಗಿದೆ. ಒನ್​ ವೇ ಕಾರಣ ಅಪಘಾತಗಳು ಸಂಭವಿಸುವ ಭಯವಿದೆ ಎಂದರು.

ಆದಷ್ಟು ಬೇಗನೇ ಸಮಸ್ಯೆ ಪರಿಹರಿಸಬೇಕು. ಗ್ರಾಮೀಣ ಭಾಗದ ಬಸ್​ಗಳು ಮುನಿರಾಬಾದ್​ ಗ್ರಾಮದೊಳಗೆ ತೆರಳುವಂತೆ ಸೂಚಿಸಬೇಕು. ಶಾಲಾ, ಕಾಲೇಜು ಸಮಯಕ್ಕೆ ಸರಿಯಾಗಿ ಬಸ್​ ಸಂಚರಿಸುವಂತೆ ವೇಳಾಪಟ್ಟಿ ರಚಿಸಬೇಕು ಎಂದು ಒತ್ತಾಯಿಸಿದರು. ಎಐಡಿಎಸ್​ಓ ಕಾರ್ಯಕರ್ತರಾದ ಸದಾಶಿವ, ವೆಂಕಟೇಶ, ವಿಜಯಾನಂದ, ದೇವ, ವಿದ್ಯಾರ್ಥಿಗಳಾದ, ಸಾಹಿಲ್​, ಸಂಜನಾ, ರೇಣುಕಾ, ಪ್ರೀತಮ್​, ಸಾಧನ, ಲಿಂಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net