ಕೊಪ್ಪಳ: ಪರೀೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಟನೆ ನಗರದಲ್ಲಿ ನಡೆದಿದೆ.
ನಿರೀಾ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬುಧವಾರ (ಮಾ.26)ಮನೆಗೆ ಬಂದ ಬಾಲಕಿ ಪರೀೆಯಲ್ಲಿ ತನಗೆ ಕಡಿಮೆ ಅಂಕ ಬಂದಿವೆ ಎಂದು ಬೇಜಾರು ವ್ಯಕ್ತಪಡಿಸಿದ್ದಾಳೆ. ಊಟ ಮಾಡದೆ, ರೂಮ್ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ. ತಾಯಿಯೊಡನೆ ಮಾತನಾಡಿಲ್ಲ. ಸಂಜೆ ತಿಂಡಿ ತಿನ್ನಲು ಕರೆದಾಗ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ಸೀರೆಯಿಂದ ಪ್ಯಾನ್ಗೆ ನೇಣುಬಿಗಿದುಕೊಂಡಿರುವುದು ಕಂಡಿದೆ. ತಕ್ಷಣ ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆಂದು ಬಾಲಕಿ ತಂದೆ ಅಶೋಕ್ ನೀಡಿದ ದೂರಿನ ಅನ್ವಯ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.