ಹೊಸ ವಿವಿಗಳನ್ನು ಮುಚ್ಚದಿರಿ

Published on

ಕೊಪ್ಪಳ: ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹಣಕಾಸು ನೆಪ ನೀಡಿ ಹೊಸ ವಿವಿಗಳನ್ನು ಮುಚ್ಚುವುದು ಸರಿಯಲ್ಲವೆಂದು ಸ್ಟೂಡೆಂಟ್ಸ್​ ಇಸ್ಲಾಮಿಕ್​ ಆರ್ಗನೈಸೇಷನ್​ ಆ್​ ಇಂಡಿಯಾ ಜಿಲ್ಲಾಧ್ಯಕ್ಷ ುರ್ಕಾನ್​ ಅಲಿ ಒತ್ತಾಯಿಸಿದರು.

ಹೊಸ ವಿವಿಗಳನ್ನು ಆರಂಭಿಸುವಾಗ ಆಗಿನ ಸರ್ಕಾರ ಅಗತ್ಯ ಅನುದಾನ ಮೀಸಲಿಟ್ಟು ಆರಂಭಿಸಬೇಕಿತ್ತು. ಯಾರೇ ಅಧಿಕಾರದಲ್ಲಿದ್ದರೂ ಶಿಕ್ಷಣ ವಿಷಯದಲ್ಲಿ ರಾಜಕೀಯ ಮಾಡಬಾರದು. ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಇದು ಲಾಭದ ರಂಗವಲ್ಲ. ಹೀಗಾಗಿ ಅನುದಾನ ಮೀಸಲಿರಿಸಿ ಅಭಿವಗೃದ್ಧಿಪಡಿಸಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳು ಶಿಕ್ಷಣ ರಂಗಕ್ಕೆ ಕಡಿಮೆ ಅನುದಾನ ನೀಡುತ್ತಿವೆ. ಮುಂದೆ ಹೊಸ ವಿವಿಗಳ ಆರಂಭ ಕೈ ಬಿಡಬೇಕು. ಈಗಿರುವ ಎಲ್ಲ ವಿವಿಗಳನ್ನು ಉಳಿಸಿಕೊಳ್ಳಬೇಕು. ಅಗತ್ಯ ಅನುದಾನ ನೀಡಿ ಅಭಿವೃದ್ಧಿಪಡಿಸಲಿ. ಶಿಕ್ಷಣ ಪ್ರೋತ್ಸಾಹಿಸಬೇಕು. ಕೊಪ್ಪಳ ಹಿಂದುಳಿದ ಜಿಲ್ಲೆಯಾಗಿದ್ದು, ಒಂದೊಮ್ಮೆ ವಿವಿ ಮುಚ್ಚಿದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಬೇರೆ ಜಿಲ್ಲೆಗೆ ತೆರಳಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಲಿದೆ ಎಂದರು.

ಸಂಘಟನೆಯ ರಾಜ್ಯ ಸಲಹಾ ಸಮಿತಿ ಸದಸ್ಯ ಪೀರ್​ ಲಟಗೇರಿ, ರಾಜ್ಯ ಕಾರ್ಯದರ್ಶಿ ಅಬೂಬಕರ್​ ಚಳಗೇರಿ, ಜಿಲ್ಲಾ ಕಾರ್ಯದರ್ಶಿ ಖಾಜಾಹುಸೇನ್​ ಡಂಬಳ, ನಗರ ಘಟಕದ ಅಧ್ಯಕ್ಷ ನಬೀಲ್​ ಅಮೀನಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net