

ಕೊಪ್ಪಳ: ಕಟ್ಟಡ ಕಾಮಗಾರಿ ಸಾಮಗ್ರಿಗಳನ್ನು ಸಂಸದ ರಾಜಶೇಖರ ಹಿಟ್ನಾಳ ಒಡೆತನದ ಪ್ರೇರಣಾ ಏಜೆನ್ಸಿ ಮೂಲಕವೇ ಪಡೆಯಬೇಕೆಂಬ ನಿಯಮ ವಿಧಿಸಿದ್ದರಿಂದ ಸ್ಟೋನ್ ಕ್ರಷರ್ ಮಾಲೀಕರು ಹಾಗೂ ಜಿಲ್ಲಾ ಗುತ್ತಿಗೆದಾರರ ನಡುವೆ ಸೃಷ್ಟಿಯಾಗಿದ್ದ ಭಿನ್ನಾಭಿಪ್ರಾಯ ಗುರುವಾರ ಶಾಸಕ ರಾವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಸುಖಾಂತ್ಯವಾಗಿದೆ. ಮೊದಲಿನಂತೆ ಕ್ರಷರ್ ಮೂಲಕವೇ ನೇರವಾಗಿ ಸಾಮಗ್ರಿ ಮಾರಾಟಕ್ಕೆ ಕ್ರಷರ್ ಮಾಲೀಕರು ಒಪ್ಪಿದ್ದಾರೆಂದು ಗುತ್ತಿಗೆದಾರರ ಸಂ ತಿಳಿಸಿದೆ.
ಕೆಲ ಗುತ್ತಿಗೆದಾರರು ಸಾಮಗ್ರಿ ಖರೀದಿಸಿ ಬಿಲ್ ನೀಡಿಲ್ಲ. ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದ್ದು ಕ್ರಷರ್ ಮಾಲೀಕರು ನಷ್ಟದಲ್ಲಿದ್ದಾರೆ. ಹೀಗಾಗಿ ಸಂಸದ ರಾಜಶೇಖರ ಹಿಟ್ನಾಳ ಒಡೆತನದಲ್ಲಿ ಕ್ರಷರ್ ಇದ್ದ ಕಾರಣ ಅವರದೇ ಒಡೆತನದ ಪ್ರೇರಣಾ ಏಜೆನ್ಸಿ ಮೂಕವೇ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ನಗದು ಪಾವತಿಸಿ ಕಟ್ಟಡ ಸಾಮಗ್ರಿ ಪಡೆಯುವಂತೆ ನಿಯಮ ವಿಧಿಸಿದ್ದರು. ಇದರಿಂದ ತಮಗೂ ಹಾಗೂ ಸಾರ್ವಜನಿಕರಿಎಗ ತೊಂದರೆ ಆಗಲಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದರು. ಅಲ್ಲದೇ ಎಲ್ಲ ಕಾಮಗಾರಿ ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದರು.
ಈ ಸಂಬಂಧ ಹಲವು ಸಭೆಗಳಾಗಿದ್ದರೂ ಸಂಧಾನ ಯಶಸ್ವಿಯಾಗಿರಲಿಲ್ಲ. ಮೂರ್ನಾಲ್ಕು ದಿನದ ಹಿಂದೆ ಶಾಸಕ ರಾವೇಂದ್ರ ಹಿಟ್ನಾಳ ಸಭೆ ನಡೆಸಿದ್ದು ಸಂಧಾನ ಯಶಸ್ವಿಯಾಗಿರಲಿಲ್ಲ. ಗುರುವಾರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಗುತ್ತಿಗೆದಾರರು, ಕ್ರಷರ್ ಮಾಲೀಕರ ಸಂದ ಪದಾಧಿಕಾರಿಗಳ ಸಭೆ ನಡೆಸಿದ್ದು, ಮೊದಲಿನಂತೆ ಸಾಮಗ್ರಿ ಪೂರೈಕೆಗೆ ಕ್ರಷರ್ ಮಾಲೀಕರು ಒಪ್ಪಿದ್ದಾಗಿ ಗುತ್ತಿಗೆದಾರರ ಸಂದ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಕಾರ್ಯದರ್ಶಿ ದೇವಪ್ಪ ಅರಕೇರಿ ತಿಳಿಸಿದ್ದಾರೆ.