

ಕೊಪ್ಪಳ: ಕಾಂಗ್ರೆಸ್ ಸರ್ಕಾರದ ಬಜೆಟ್ ನಿಂದ ಹೆಚ್ಚಿನ ನಿರೀಕ್ಷೆ ಏನೂ ಇಲ್ಲ ಎಂಬ ನಮ್ಮ ನಿಲುವನ್ನು ಈ ಸರಕಾರ ಸ್ಪಫ್ಟಿಪಡಿಸಿದೆ. ಕೊಪ್ಪಳಕ್ಕೆ ಏನಾದರೂ ಸಿಕ್ಕಿದೆಯೇ ಎಂಬುದನ್ನು ಕನ್ನಡಕ ಹಾಕಿ ಹುಡುಕುವಂತಹ ಪರಿಸ್ಥಿತಿ ಇದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ತಿಳಿಸಿದ್ದಾರೆ.
ಸೂಪರ್ ಸ್ಪೆಫಿಾಲಿಟಿ ಹಾಗೂ ಮೇಕೆ ಮತ್ತು ಕುರಿ ಮಾರುಕಟ್ಟೆ ಯೋಜನೆಗಳ ಘೋಫಿಣೆ ಬಿಟ್ಟಂತೆ ಕೊಪ್ಪಳಕ್ಕೆ ಬೇರೆ ಏನು ಇಲ್ಲ. ಆರ್ಥಿಕ ಆಶಿಸ್ತು ನೋಡಿದರೆ ಈ ಯೋಜನೆಗಳು ಕಾರ್ಯರೂಪಕ್ಕೆ ಬರುವುದು ಅಸಾಧ್ಯ. ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಕುರಿತಂತೆ ಆಂಧ್ರ ಸರಕಾರದೊಡನೆ ಚರ್ಚಿಸುವುದಾಗಿ ಹೇಳಲಾಗಿದೆ. ಏನು ಚರ್ಚೆ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಇಫಿ್ಟು ಪ್ರಮಾಣದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ರ್ನಿಲಕ್ಷಕ್ಕೆ ಒಳಗಾದ ಉದಾಹರಣೆಗಳೇ ಇರಲಿಲ್ಲ. ಇಲ್ಲಿನ ಶಾಸಕರು, ಸಚಿವರು ಹಾಗೂ ಆರ್ಥಿಕ ಸಲಹೆಗಾರರು ಏನು ಮಾಡುತ್ತಿದ್ದರೆಂದು ಕೇಳುವ ಪರಿಸ್ಥಿತಿ ನಿಮಾರ್ಣವಾಗಿದೆ.
ಕೊಪ್ಪಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಮತದಾರರು ತಮಗೆ ತಾವೇ ಶಾಪ ಹಾಕಿಕೊಳ್ಳುತ್ತಾ ಧೂಳಿನಲ್ಲಿ, ಗುಂಡಿ ಬಿದ್ದ ರಸ್ತೆಯಲ್ಲಿ, ಕನಿಫ್ಠಿ ಸೌಲಭ್ಯಗಳು ಇಲ್ಲದ ವ್ಯವಸ್ಥೆಯಲ್ಲಿ ಬದುಕುವಂತಾಗಿದೆ. ಕೇಂದ್ರ ಸರಕಾರವನ್ನು ದೋಷಿಸುತ್ತ, ಸುಳ್ಳಿನ ಕಂತೆ ಬಿಚ್ಚುತ್ತಾ, ಘೋಷಿಸಿದ ಯೋಜನೆಗಳ ಅನುಫಿ್ಠಾನಕ್ಕೆ ಹಣಕಾಸನ್ನು ಹೇಗೆ ಕ್ರೂಢಿಕರಿಸಲಾಗುವುದು ಎಂಬುದನ್ನು ಮರೆಮಾಚುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತುತಪಡಿಸಿರುವ ಇದು ಹಾರಿಕೆಯ, ತೋರಿಕೆಯ ಬಜೆಟ್. ಇಲ್ಲಿ ಘೋಷಿಸಲಾಗಿರುವ ಭರವಸೆಗಳನ್ನು ನೋಡಿದರೆ ಇದು ಸಿದ್ದರಾಮಯ್ಯನವರ ಕೊನೆಯ ಬಜೆಟ್ ಹಾಗೂ ಅವರು ಮುಖ್ಯಮಂತ್ರಿ ಸ್ಥಾನದಿಂದ ಶೀಘ್ರದಲ್ಲಿ ನಿರ್ಗಮಿಸಲಿದ್ದಾರೆ ಎಂಬುದರ ಸೂಚನೆಯಂತಿದೆ ಎಂದು ಟೀಕಿಸಿದ್ದಾರೆ.