

ಕೊಪ್ಪಳ: ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ ಫಲಿತಾಂಶ ಸುಧಾರಣೆ ಆದ್ಯತೆ ನೀಡುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಲಿತಾಂಶ ಬರಬೇಕು. ರಾಜ್ಯಮಟ್ಟದಲ್ಲಿ ಅಲ್ಲದಿದ್ದರೂ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಬರುವಂತೆ ನೋಡಿಕೊಳ್ಳಿ. ವಾರ್ಷಿಕ ಪರೀೆ ಸಮೀಪಿಸುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆಗೆ ವಿಶೇಷ ಆಸಕ್ತಿ ವಹಿಸಿ. ಹಾಜರಾತಿ ಕಡಿಮೆ ಇದ್ದರೆ ಪಾಲಕರ ಸಭೆ ಕರೆದಿ ಮಾಹಿತಿ ನೀಡಿ. ಮಕ್ಕಳಿಗೆ ವಿಷಯಗಳನ್ನು ಅರ್ಥ ಮಾಡಿಸಿ. ಮಕ್ಕಳ ಕಲಿಕಾ ಮಟ್ಟ ಆಧರಿಸಿ ಎ,ಬಿ,ಸಿ,ಡಿ ವರ್ಗ ಮಾಡಿದ್ದೇವೆ. ಮೊದಲೆರೆಡು ವರ್ಗದ ಮಕ್ಕಳು ಪಾಸ್ ಆಗುತ್ತಾರೆ. ಸಿ ಮತ್ತು ಡಿ ವರ್ಗದ ವಿದ್ಯಾರ್ಥಿಗಳ ಲಿತಾಂಶ ಕಡಿಮೆ ಆಗುತ್ತದೆ ಎಂದರು.
ವಿಷಯವಾರು ದಿನಕ್ಕೊಂದು ಪ್ರಶ್ನೆ ನೀಡಿ. ವಾರಕ್ಕೆ 30 ಪ್ರಶ್ನೆ ನೀಡಿ. ಲಿತಾಂಶ ಪರಿಶೀಲಿಸಿ. ಮನೆ ಭೇಟಿ ನೀಡಿ ಹಾಜರಾತಿ ಹೆಚ್ಚಿಸಿ. ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿ ನಡೆಸಿ. ನೋಡಲ್ ಅಧಿಕಾರಿಗಳು ನಿಮ್ಮ ಶಾಲೆಗಳಿಗೆ ನಿರಂತರ ಭೇಟಿ ನೀಡಿ. ವಿಷಯವಾರು ಪ್ರಶ್ನೆ ಪತ್ರಿಕೆಗಳು ಜಿಲ್ಲಾದ್ಯಂತ ಒಂದೇ ಮಾದರಿಯಲ್ಲಿರಲಿ ಎಂದು ಸೂಚಿಸಿದರು.
ಡಿಡಿಪಿಐ ಶ್ರೀಶೈಲ ಬಿರಾದಾರ, ಡಿಡಿಪಿಯು ಜಗದೀಶ, ಬಿಇಒಗಳು, ಶಾಲಾ&ಕಾಲೇಜು ಮುಖ್ಯಶಿಕ್ಷಕರು, ನೋಡಲ್ ಅಧಿಕಾರಿಗಳಿದ್ದರು.