

ಕೊಪ್ಪಳ: ಮೇ 26ರಿಂದ ಜೂನ್ 2ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ-2 ನಡೆಯಲಿದ್ದು ಸುಗಮವಾಗಿ ನಡೆಸುವ ದೃಷ್ಟಿಯಿಂದ ಪರೀಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ಯಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಲಿನ್ ಅತುಲ್ ಆದೇಶಿಸಿದ್ದಾರೆ.
ಕೊಪ್ಪಳ- ತಾಲೂಕಿನ 10, ಗಂಗಾವತಿ- 6, ಕನಕಗಿರಿ- 2, ಕಾರಟಗಿ- 2, ಕುಷ್ಟಗಿ 8, ಯಲಬುರ್ಗಾ- 4 ಹಾಗೂ ಕುಕನೂರಿನ- 3 ಸೇರಿ 35 ಪರೀಕ್ಷಾ ಕೇಂದ್ರಗಳಲ್ಲಿ ಪರೀೆ ನಡೆಯಲಿವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಪರೀೆ ಇರಲಿವೆ ಎಂದು ತಿಳಿಸಿದ್ದಾರೆ.