

ಕೊಪ್ಪಳ: ತಾಲೂಕಿನ ಕಿಡದಾಳ ಗ್ರಾಮದ ಶ್ರೀ ಶಾರದಾ ಇಂರ್ಟನಾಷ್ಯನಲ್ ಶಾಲೆ ಹಾಗೂ ಶಾರದಾ ಚಿಣ್ಣರ ಲೋಕದಲ್ಲಿ ಶಾಲಾ ಸಂಸತ್ತು ರಚನೆ ಹಾಗೂ ಸದಸ್ಯರ ಪದಗ್ರಹಣ ನಡೆಯಿತು.
ಎಎಸ್ಪಿ ಹೇಮಂತ್ ಕುಮಾರ್, ಸಂಸ್ಥೆ ಪದಾಧಿಕಾರಿಗಳಾದ ನೀಲಾಂಬಿಕಾ, ಕಿರಣ್ ಪಾಟೀಲ್, ಎಲ್.ಶಿವಪ್ರಕಾಶ, ಡಾ.ವಿಶ್ವನಾಥ ರೆಡ್ಡಿ, ಪ್ರಾಚಾರ್ಯ ರುರಾಮ, ಆಡಳಿತಾಧಿಕಾರಿ ರೆಚಲ್ ಸುಗಂಧಿ ಇತರರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ಮುಖ್ಯಸ್ಥನಾಗಿ ರೋಚನ್ ಆದೋನಿ, ವಿದ್ಯಾರ್ಥಿನಿಯರ ಮುಖ್ಯಸ್ಥಳಾಗಿ ಮಾನಸ, ಕ್ರೀಡಾ ನಾಯಕನಾಗಿ ಶ್ರೇಯಸ್, ನಾಯಕಿಯಾಗಿ ಪ್ರಣಿತಾ ಅರಳಿ, ಶಿಸ್ತು ವಿಭಾಗದ ನಾಯಕನಾಗಿ ಯದುಕೃಷ್ಣ, ನಾಯಕಿಯಾಗಿ ಧರಣಿ, ಸಾಂಸತಿಕ ವಿಭಾಗದ ನಾಯಕನಾಗಿ ಕುಶಾಲ್, ಮೇನಾ ಆಯ್ಕೆಯಾದರು. ಎಲ್ಲರಿಗೂ ಪ್ರಮಾಣ ವಚನ ಬೋಧಿಸಲಾಯಿತು.
ನೂತನ ಸದಸ್ಯರಿಗೆ ರೆಚೆಲ್ ಸುಗಂಧಿ ಪ್ರಮಾಣವಚನ ಬೋಧಿಸಿದರು. ಶಾರದಾ ಶಾಲೆ, ಚಿಣ್ಣರ ಲೋಕ, ಪಿಯು ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.