ಕೊಲೆ, ಕಳ್ಳತನ ಆರೋಪಿಗಳ ಬಂಧನ, ಎಸ್ಪಿ ಯಶೋದಾ ವಂಟಗೋಡಿ ಮಾಹಿತಿ

sp koppal press meet theft case and murder case
Published on

ಕೊಪ್ಪಳ: ಎರಡು ಕೊಲೆ ಪ್ರಕರಣ ಹಾಗೂ ಒಂದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.

ಕೊಪ್ಪಳ ತಾಲೂಕಿನ ತಾಲೂಕಿನ ಬಹದ್ದೂರ ಬಂಡಿ ಗ್ರಾಮದಲ್ಲಿ ಕಳೆದ ಮಂಗಳವಾರ ಬೆಳಗಿನ ಜಾವ ಶ್ರೀನಾಥ ಖಾರ್ವಿ ಎಂಬಾತ ಕೊಲೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಅದೇ ಗ್ರಾಮದ ಖಾಜಾಬನಿ ಎಂಬಾಕೆಯನ್ನು ಬಂಧಿಸಿದ್ದೇವೆ. ಮೃತ ಶ್ರೀನಾಥ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲೂಕಿನ ಬಳಂಬಾರ ಮೂಲದಾತ. ಗೌಂಡಿ ಕೆಲಸಕ್ಕೆಂದು ನಾಲ್ಕೆ$ದು ವರ್ಷಗಳಿಂದ ಬಹದ್ದೂರ ಬಂಡಿ ಗ್ರಾಮದಲ್ಲಿ ನೆಲೆಸಿದ್ದನು. ಖಾಜಾಬನಿಯೊಂದಿಗೆ ಸಂಬಂಧವಿರಿಸಿಕೊಂಡಿದ್ದ. ಅಲ್ಲದೇ ಕುಡಿತ ಹಾಗು ಇತರ ಹೆಣ್ಣುಗಳ ಸಹವಾಸ ಮಾಡಿದ್ದ. ಇದೇ ಕಾರಣಕ್ಕೆ ಆರೋಪಿ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾಳೆ. 24 ಗಂಟೆಯಲ್ಲಿ ಪ್ರಕರಣ ಭೇದಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪತಿ ಕೊಂದ ಪತ್ನಿ ಬಂಧನ : ಕಳೆದ ಕೆಲ ತಿಂಗಳ ಹಿಂದೆ ಯಲಬುರ್ಗಾ ತಾಲೂಕಿ ವಟಪರವಿ ಗ್ರಾಮದಲ್ಲಿ ಕೊಲೆಯಾಗಿದ್ದ ಪ್ರಭುರಾಜ ಕೊಳಜಿ (38) ಎಂಬಾತನನ್ನು ಆತನ ಪತ್ನಿ ಮಂಜುಳಾ ಕೊಲೆ ಮಾಡಿರುವುದು ದೃಢಪಟ್ಟಿದ್ದು, ಆಕೆಯನ್ನು ವಶಕ್ಕೆ ಪಡೆದಿದ್ದೇವೆ.
ಪ್ರಭುರಾಜ ಕುಡಿತದ ದಾಸನಾಗಿದ್ದು, ಇತರ ಹೆಣ್ಣುಗಳ ಸಹವಾಸ ಮಾಡಿದ್ದ. ಹೊಲದ ಶೆಡ್​ನಲ್ಲಿ ಮಲಗಿದ್ದಾಗ 2023, ಡಿಸೆಂಬರ್​ 15ರಂದು ಬೆಳಗಿನ ಜಾವ 4.30ರ ಹೊತ್ತಿಗೆ ಹಾರಿಯಿಂದ ಬಲ ಕುತ್ತಿಗೆಯ ಹತ್ತಿರ ಜಜ್ಜಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ. ಆರೋಪಿ ಮಾನಸಿಕವಾಗಿ ಸದೃಢವಾಗಿದ್ದು, ನಮ್ಮ ತಂತ್ರಗಾರಿಕೆಗಳಿಗೆ ಸರಿಯಾದ ಉತ್ತರ ನೀಡಲಿಲ್ಲ. ಪ್ರಬಲ ಸಾಾಧಾರ ದೊರೆಯದ ಕಾರಣ ಪತ್ತೆಗೆ ಸಮಯ ಹಿಡಿಯಿತು ಎಂದು ವಿವರಿಸಿದರು.

24 ಗಂಟೆಯಲ್ಲಿ ಕಳ್ಳರು ವಶಕ್ಕೆ : ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಏ.16ರಂದು ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದೇ ಗ್ರಾಮದ ನಾಗರಾಜ ದಿವಟರ್​ ಹಾಗೂ ಬಸನಗೌಡ ತೋಟಗಂಟಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಗ್ರಾಮದ ಶರಣಮ್ಮ ಎಂಬುವರ ಮನೆಯಲ್ಲಿ 10.5 ತೊಲ ಚಿನ್ನದ ಆಭರಣಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ಮಹಿಳೆ ನೀಡಿದ ದೂರು ಆಧರಿಸಿ 24 ಗಂಟೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಲಾಗಿದೆ. ಆರೋಪಿಗಳಿಂದ 7,50.000ರೂ. ಮೌಲ್ಯದ 10.5 ತೊಲ ಬಂಗಾರ ವಶಪಡಿಸಿಕೊಳ್ಳಲಾಗಿದೆ ಎಂದರು. ಎಎಸ್ಪಿ ಹೇಮಂತಕುಮಾರ್​, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಪಿಐಗಳಾದ ಸುರೇಶ, ಮೌನೇಶ್ವರ ಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net