ಸೌಜನ್ಯ ಪ್ರಕರಣ ತನಿಖೆಯಾಗಲಿ

district koppal soujanya case enquiry protest
Published on

ಕೊಪ್ಪಳ: ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣ ತನಿಖೆ ನಡೆಸಿ ಅಪರಾಧಿಗಳಿಗೆ ಶಿೆ ವಿಧಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಒಕ್ಕೂಟದ ಮುಖಂಡರು ಶುಕ್ರವಾರ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

2012ರಲ್ಲಿ ಕಾಲೇಜಿಗೆ ಹೋಗಿ ಮರಳಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಳನ್ನು ದುರುಳರು ಕಾಡಿನಲ್ಲಿ ಎಳೆದೊಯ್ದು ಹತ್ಯೆ ಮಾಡಿದ್ದರು. ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದಾಗ ಹೋರಾಟಗಳು ಹೆಚ್ಚಿದವು. ಆಗ ಪ್ರಕರಣ ದಾಖಲಿಸಿಕೊಂಡರು ತನಿಖೆ ಸರಿಯಾಗಿ ನಡೆಯಲಿಲ್ಲ. ಆಳುವ ಸರ್ಕಾರಗಳು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಸಂತೋಷರಾವ್​ ಎಂಬಾತನನ್ನು ಬಂಧಿಸಲಾಯಿತು. ಪ್ರಕರಣಕ್ಕೂ ಆರೋಪಿಗೂ ಸಂಬಂಧವಿಲ್ಲವೆಂದು ಸೌಜನ್ಯ ತಾಯಿ ಹೇಳಿದರೂ ಯಾರೋಬ್ಬರು ಕಿವಿಗೆ ಹಾಕಿಕೊಳ್ಳಲಿಲ್ಲ. ಹಲವು ವರ್ಷಗಳ ವಿಚಾರಣೆ ಬಳಿಕ ಆರೋಪಿ ಖುಲಾಸೆಯಾಗಿದ್ದಾನೆ.

ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಹೋದ ಸಂಬಂಧಿಗಳ ಕೈವಾಡವಿದೆ ಎಂಬ ಆರೋಪಗಳಿವೆ. ಸ್ವತ@ ಧರ್ಮಾಧಿಕಾರಿಗಳು ತನಿಖೆಗೆ ಆಗ್ರಹಿಸಿದ್ದಾರೆ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಬಂಧಿಸಬೇಕು. ತನಿಖೆ ನಡೆಸಿ ನಿಜವಾದ ಅಪರಾಧಿಗಳಿಗೆ ಶಿೆ ವಿಧಿಸಬೇಕು. ಈ ಮೂಲಕ ಜನರು ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಇಷ್ಟೆಲ್ಲ ನಡೆದರೂ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡದಿರುವುದು ನಾಚಿಕೆಗೇಡಿನ ಸಂಗತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಪ್ರಕರಣದಿಂದ ರಾಜ್ಯದ ಮಾನ ಹೋಗಿದೆ. ಹೋರಾಟಗಾರರ ಹೋರಾಟ ಮುಂದುವರೆಯಲಿದೆ. ಸರ್ಕಾರ ತಕ್ಷಣ ಎಚ್ಚೆತ್ತು ಮರು ತನಿಖೆ ನಡೆಸುವಂತೆ ಒತ್ತಾಯಿಸಿದರು.

ಪ್ರಗತಿಪರ ಸಂಟನೆಗಳ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಗಾಳೆಪ್ಪ ಮುಂಗೋಲಿ, ಸಣ್ಣ ಹನುಮಂತ, ಕಾಸಿಂ ಸರ್ದಾರ, ಬಸವರಾಜ ಶೀಲವಂತರ, ಹನುಮಂತಪ್ಪ ಹೊಳೆಯಾಚೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net