ವಾರ್ಡನ್​ಗಳ ಸಭೆ ಪ್ರತಿ ತಿಂಗಳು ನಡೆಸಿ

Published on

ಕೊಪ್ಪಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕರ ಸಂದ ಜಿಲ್ಲಾ ಪದಾಧಿಕಾರಿಗಳು ಗುರುವಾರ ಡಿಸಿ ನಲಿನ್​ ಅತುಲ್​ಗೆ ಮನವಿ ಸಲ್ಲಿಸಿದರು.

ಸಾದಿಲ್ವಾರು ಬಿಲ್​ಗಳು ಪ್ರತಿ ತಿಂಗಳು ಪಾವತಿಯಾಗುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ಮಾಹೆ ವಾರ್ಡ್​ನಗಳ ಸಭೆ ನಡೆಸಿ ಕುಂದು ಕೊರತೆ ಆಲಿಸುತ್ತಿಲ್ಲ. ಸಿಲಿಂಡರ್​ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಸಣ್ಣ ಪುಟ್ಟ ಕೆಲಸ, ಕಾರ್ಯಗಳಿಗೂ ಸ್ಪಂದಿಸುವುದಿಲ್ಲ. ಗುಣಮಟ್ಟದ ಆಹಾರ ಪದಾರ್ಥಗಳು ಅವಧಿಯೊಳಗೆ ಪೂರೈಕೆ ಆಗುತ್ತಿಲ್ಲ. ಮೇಲಧಿಕಾರಿಗಳ ಷಡ್ಯಂತ್ರದಿಂದ ನಿಲಯ ಪಾಲಕರನ್ನು ಬಲಿಪಶು ಮಾಡಲಾಗುತ್ತಿದೆ. ಸಿಬ್ಬಂದಿ ಸೇವಾ ಪುಸ್ತಕ ಪರಿಷ್ಕರಣೆ ಆಗುತ್ತಿಲ್ಲವೆಂದು ದೂರಿದರು.

ಎಲ್ಲ ವಸತಿ ನಿಲಯಗಳಿಗೆ ಮೂಲ ಸೌಕರ್ಯ ಒದಗಿಸಿ. ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ ಪಾವತಿಸಿ. ಗುಣಮಟ್ಟದ ಆಹಾರ ಪದಾರ್ಥ ಪೂರೈಕೆಗೆ ಟೆಂಡರ್​ದಾರರಿಗೆ ಸೂಚಿಸಿ. ಪ್ರತಿ ತಿಂಗಳು ವಾರ್ಡನ್​ಗಳ ಸಭೆ ನಡೆಸಿ ಸಮಸ್ಯೆ ಆಲಿಸಿ. ಅನ್ಯ ಕೆಲಸಕ್ಕೆ ನಿಯೋಜಿಸಿದಾಗ ಆದೇಶ ಹಾಕಿ. ಖರ್ಚು ವೆಚ್ಚ ನೀಡಿ. ಎಸ್​ಡಿಎ, ಎ್​ಡಿಎ ಹಾಗೂ ಶಿಕ್ಷಕರಿಗೆ ಜೂನಿಯರ್​ ವಾರ್ಡನ್​ ಪ್ರಭಾರ ವಹಿಸಬಾರದೆಂದು ಒತ್ತಾಯಿಸಿದರು.

ನಿಲಯ ಪಾಲಕರಾದ ಕರಿಯಪ್ಪ, ಕೀರಪ್ಪ ಶಿಡ್ಲಬಾವಿ, ಪರಶುರಾಮ ಬುಗಟಿ, ಮಾರುತಿ ಜೆ., ರಾಮಚಂದ್ರ, ರವಿ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net