ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಜ.19ರಂದು

Published on

ಕೊಪ್ಪಳ: ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಜ.19ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಗ್ರೇಡ್​-2 ತಹಸೀಲ್ದಾರ್​ ರಜನಿಕಾಂತ ಹೇಳಿದರು.

ನಗರದ ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಜಯಂತಿ ಆಚರಣೆ ಸಂಬಂಧ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ನಿಗದಿಪಡಿಸಿದಂತೆ ಜ.15 ರಂದು ಎಲ್ಲ ತಾಲೂಕುಗಳಲ್ಲಿ, ಶಾಲಾ&ಕಾಲೇಜು ವಸತಿ ನಿಲಯಗಳಲ್ಲಿ ಜಯಂತಿ ಆಚರಿಸಲಾಗುವುದು. ಸಮುದಾಯದವರ ಬೇಡಿಕೆಯಂತೆ ಜ.19ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುತ್ತದೆ. ಅಂದು ಬೆಳಗ್ಗೆ 8.30ಕ್ಕೆ ಗವಿಮಠದಿಂದ ಸಾಹಿತ್ಯ ಭವನದವರೆಗೆ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು.

ಬಳಿಕ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ. ಜನರಿಗೆ ಕುಡಿವ ನೀರು, ಗಣ್ಯರಿಗೆ ಸನ್ಮಾನಕ್ಕೆ ಏರ್ಪಾಟು ಮಾಡಿ. ಪೊಲೀಸರು ಮೆರವಣಿಗೆಗೆ ಅಗತ್ಯ ಭದ್ರತೆ ಕಲ್ಪಿಸಿ. ಯಾವುದೇ ಅನನುಕೂಲವಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಿ ಎಂದು ಸೂಚಿಸಿದರು.

ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಸಮುದಾಯ ಜಿಲ್ಲಾಧ್ಯಕ್ಷ ನಿಂಗಪ್ಪ ಸುಣಗಾರ, ಜಿಲ್ಲಾ ಉಪಧ್ಯಾಕ್ಷ ರಾಮಣ್ಣ ಅಳವಂಡಿ, ಕಲ್ಯಾಣ ಕರ್ನಾಟಕ ಮಾಧ್ಯಮ ಪ್ರತಿನಿಧಿ ರಾಮು ಪೂಜಾರ,

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಭೋವಿ, ಜಿಲ್ಲಾ ಸದಸ್ಯರಾದ ಮಾಸ್ತಿ ಕಟ್ಟಿಮನಿ, ಹನುಮೇಶ್​ ಕುಳ್ಳಿಕರ್​, ಗಾಳಪ್ಪ ಗಂಗಾವತಿ, ಸುಂಕಪ್ಪ ಮಾಲಗಿತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net