

ಕೊಪ್ಪಳ: ತಾಲೂಕಿನ ಇತಿಹಾಸ ಪ್ರಸಿದ್ಧ ಕರ್ಕಿಗಳ್ಳಿಯ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) 21ನೇ ಮಹಾರಥೋತ್ಸವ ಗುರುಪೂರ್ಣಿಮೆ ಅಂಗವಾಗಿ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜ್ಯ ಹಾಗೂ ಮಹಾರಾಷ್ಟ್ರ ಭಕ್ತರು ಭಾಗಿಯಾಗಿದ್ದು ವಿಶೇಷ.
ರಥೋತ್ಸವಕ್ಕೂ ಮೊದಲು ಹೋಮ ಪೂರ್ಣಾಹುತಿ ನಡೆಯಿತು. ಬಳಿಕ ಗುರುಗಳಾದ ಸುರೇಶ ಪಾಟೀಲ್ ಆಶೀರ್ವಚನ ನೀಡಿ ಮಾತನಾಡಿ, ಕರ್ಕಿಹಳ್ಳಿ ಪ್ರಸಿದ್ಧ ಸಿದ್ಧ ಕ್ಷೇತ್ರ. ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಕ್ಷೇತ್ರಕ್ಕಿದೆ. ಅನೇಕ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ. ಅಖಂಡ ವೀಣಾ ಪಾರಾಯಣದಲ್ಲಿ ಭಾಗಿಯಾದವರೆಲ್ಲ ಅದೃಷ್ಟವಂತರು. ಭಗವಂತನ ಸೇವೆ ಎಲ್ಲರಿಗೂ ಸಿಗದು ಎಂದರು. ಶೇಷಾಚಲ ಭಟ್ ವಣಗೇರಿ ಅವರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಜಾತ್ರೋತ್ಸವ ಅಂಗವಾಗಿ ಧಾರಣಸರಸ್ವತಿ ಹೋಮ, ಮಹಾಲಕ್ಷಿ$್ಮ ಹೋಮ, ಆಷಾಡ ಏಕಾದಶಿ ಅಂಗವಾಗಿ ಕ್ಷೀರಾಭಿಷೇಕ, ತುಳಸಿ ಆರ್ಚನೆ, ಸತ್ಯನಾರಾಯಣ ವೃತ, ಮಹಾವಿಷ್ಣು ಯಾಗ, ದತ್ತ ಮೂಲ ಮಂತ್ರದಿಂದ ದತ್ತಾತ್ರೇಯ ಹೋಮ, ಸಪ್ತಶತಿ ಪಾರಾಯಣ, ನವಚಂಡಿಹೋಮ ನೆರವೇರಿದವರು. ಮೃತ್ಯುಂಜೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಸಾಂಸತಿ ಕಾರ್ಯಕ್ರಮ ನಡೆದವು. ಅಖಂಡ ವೀಣಾಮಂಗಳ, ಮಹಾರಥೋತ್ಸವದ ರಥಾಂಗ ಹೋಮ, ಆರತಿ, ನೈವೇದ್ಯ, ಅನ್ನಸಂತರ್ಪಣೆ ಮತ್ತು ಸಿಡಿಮದ್ದಿನ ಚಿತ್ತಾರ ಸಂಭ್ರಮದಿಂದ ಜರುಗಿತು.