ಚಿತ್ರೀಕರಣಕ್ಕೆ ಗವಿಶ್ರೀಗಳಿಂದ ಚಾಲನೆ

shiva sharana molige marayya film shooting in gavimath koppal
ಡಾ.ಮಧುಸೂದನ ಹವಾಲ್ದಾರ.
Published on

ಕೊಪ್ಪಳ: ಶಿವ ಶರಣ ಮೋಳಿಗೆ ಮಾರಯ್ಯ ಜೀವನ ಆಧಾರಿತ ಚಲನಚಿತ್ರ ನಿರ್ಮಿಸುತ್ತಿದ್ದು ಮೇ10ರ ಬಸವ ಜಯಂತಿಯಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆಂದು ಚಿತ್ರದ ನಿರ್ದೇಶಕ, ನಿರ್ಮಾಪಕ ಡಾ.ಮಧುಸೂದನ ಹವಾಲ್ದಾರ ಹೇಳಿದರು.

ನಾನು ಮೂಲತ ಹೊಸಪೇಟೆಯವನು. ಹಲವು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ದಾಸ ಸಾಹಿತ್ಯದ ಮೇಲೆ ಒಲವು ಬಂದು ಜಗನ್ನಾಥ ದಾಸರು, ಪ್ರಸನ್ನ ವೆಂಕಟ ದಾಸರು, ವಿಜಯ ದಾಸರು ಮೂರು ಚಿತ್ರ ಮಾಡಿರುವೆ. ಅವುಗಳು ಕೈ ಹಿಡಿದಿವೆ. ಮೊದಲಿನಿಂದಲೂ ಗವಿಮಠಕ್ಕೆ ಆಗಮಿಸುತ್ತೇನೆ. ಶ್ರೀಗಳ ಜತೆ ನನ್ನ ಸಿನಿಮಾಗಳ ಕುರಿತು ಚರ್ಚಿಸಿರುವೆ. ಅವರು ಶಿವ ಶರಣರ ಕುರಿತು ಚರ್ಚಿಸಿದರು. ಬಳಿಕ ಸಾಣೆಹಳ್ಳಿ ಶ್ರೀಗಳನ್ನು ಸಂಪರ್ಕಿಸಿದಾಗ ಶಿವ ಶರಣ ಮೋಳಿಗೆ ಮಾರಯ್ಯ ಅವರ ಕುರಿತು ಆಸಕ್ತಿ ಮೂಡಿತು. ಅವರ ಪುಸ್ತಕ ಓದಿದ ನಂತರ ಚಿತ್ರ ಮಾಡಲು ನಿರ್ಧರಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗವಿಶ್ರೀಗಳು ನಮಗೆ ಸಾಥ್​ ನೀಡಿದ್ದು, ಬಸವ ಜಯಂತಿಯಂದು ಗವಿಮಠದಲ್ಲೇ ಶ್ರೀಗಳು ಕ್ಲಾಪ್​ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಲಿದ್ದಾರೆ. ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ಇತರರು ಭಾಗವಹಿಸುವರು. ಕೊಪ್ಪಳ, ಹೊಸಪೇಟೆ ಸೇರಿ ಸ್ಥಳಿಯ ಕಲಾವಿದರನ್ನೇ ಚಿತ್ರದಲ್ಲಿ ಬಳಸಿಕೊಳ್ಳಲಾಗುವುದು. ಜತೆಗೆ ಈ ಭಾಗದಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಶರದಕುಮಾರ್​ ದಂಡಿನ್​, ಇಂಗಳಗಿ ನಾಗರಾಜ, ಕೆ.ಪುರುಷೋತ್ತಮ ರೆಡ್ಡಿ, ನಿಶ್ಚಿತಾ ಶೆಟ್ಟಿ ಅಭಿನಯಿಸಲಿದ್ದಾರೆ. ನನ್ನ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು, ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದರು.
ನಾಯಕ ನಟ ವಿಷ್ಣು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net