ವೀರಭದ್ರಪ್ಪ ಕೊಡುಗೆ ಅಪಾರ

district koppal shirur veerabhadrappa sharana sahitya parishat
Published on

ಕೊಪ್ಪಳ: ಶಿರೂರು ವೀರಭದ್ರಪ್ಪ ಅವರ ಸಾಮಾಜಿಕ ಕಾರ್ಯಗಳು ಅವಿಸ್ಮರಣೀಯ ಎಂದು ಹಿರಿಯ ಸಾಹಿತಿ ಎಚ್​.ಎಸ್​.ಪಾಟೀಲ್​ ಹೇಳಿದರು.

ನಗರದ ಖಾಸಗಿ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಹಮ್ಮಿಕೊಂಡಿದ್ದ ದಿ.ಶಿರೂರು ವೀರಭದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ಪ್ರಸಾದ ನಿಲಯ, ಸ್ತ್ರೀ ಶಿಕ್ಷಣಕ್ಕೆ ಆದ್ಯತೆ, ಹರಿಜನರ ಉದ್ದಾರ, ಚರಕ ಸಂಘಗಳ ಸ್ಥಾಪನೆ, ಗ್ರಂಥಾಲಯ ಸ್ಥಾಪನೆಯಂತಹ ಅನೇಕ ಜನಪರ ಕಾರ್ಯಗಳನ್ನು ವೀರಭದ್ರಪ್ಪ ಮಾಡಿದ್ದಾರೆ. ತಮ್ಮ ಕಾರ್ಯಗಳ ಮೂಲಕ ಸಮಾಜದಲ್ಲಿ ಅವಿಸ್ಮರಣೀಯವಾಗಿ ಉಳಿದಿದ್ದಾರೆ. ಮಾದರಿ ವ್ಯಕ್ತಿಯಾಗಿ ಬದುಕಿದ್ದರು ಎಂದರು.

ದತ್ತಿದಾನಿ ಡಾ.ಬಿ.ವಿ.ಶಿರೂರು ವೀರಭದ್ರಪ್ಪ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ತಮ್ಮ ತಂದೆ ಕುರಿತು ವಿವರ ನೀಡಿದರು. ಶರನ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಶಿವಕುಮಾರ ಕುಕನೂರು, ಡಾ.ಕೆ.ರವೀಂದ್ರನಾಥ ಮಾತನಾಡಿದರು. ಪರಿಷತ್​ ಯುವ ಟಕ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ಪ್ರೊ.ತಿರುಪತಿ ಮೈಲಾಪುರ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯೆ ನಿರ್ಮಲಾ ಬಳ್ಳೊಳ್ಳಿ, ತಾಲೂಕು ಅಧ್ಯೆ ಅರುಣಾ ನರೇಂದ್ರ, ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರು, ಪ್ರಮುಖರಾದ ರವಿ ಕಾಂತನವರ, ಹುಲುಗಪ್ಪ ಕಟ್ಟಿಮನಿ, ಶರಣು ಡೊಳ್ಳಿನ್​, ಬಸವರಾಜ ಸಂಕನಗೌಡರ, ಸೋಮನಗೌಡ ಹೊಗರನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net