

ಕೊಪ್ಪಳ: ನಗರದ ಎಸ್ಪಿ ಕಚೇರಿ ಗಣಕಯಂತ್ರ ವಿಭಾಗದ ನಿರ್ವಾಹಕರಾಗಿರುವ ಹೆಡ್ಕಾನಿಸ್ಟೇಬಲ್ ಶಂಶುದ್ದೀನ್ ಅವರಿಗೆ 2025ನೇ ಸ್ವಾತಂತ್ರ$್ಯ ದಿನದ ಅಂಗವಾಗಿ ರಾಷ್ಟ್ರಪತಿ ಪದಕ ಲಭಿಸಿದೆ.
ನಿವೃತ್ತ ಪಿಎಸ್ಐ ಮಹಮ್ಮದ್ ಫಕೀರುದ್ದೀನ್ ಹಾಗೂ ಪ್ಯಾರಿ ಬೇಗಂ ದಂಪತಿ ಪುತ್ರರಾಗಿದ್ದು, ಕಳೆದ 26 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಇಲಾಖೆ ರೂಪಿಸುವ ಸಾಫ್ಟ್ವೇರ್ಗಳನ್ನು ಜಿಲ್ಲಾ ಮಟ್ಟದಲ್ಲಿ ಜಾರಿ ಮಾಡುವುದು, ಸಿಬ್ಬಂದಿಗೆ ತರಬೇತಿ, ಪೊಲೀಸ್ ಠಾಣೆಗಳಲ್ಲಿನ ಕಂಪ್ಯೂಟರ್ ತಾಂತ್ರಿಕ ಸಮಸ್ಯೆಗಳ ಪರಿಹಾರ ಕೆಲಸದಲ್ಲಿ ನಿರತರಾಗಿದ್ದಾರೆ. ಇವರಿಗೆ 2019ರಲ್ಲಿ ಮುಖ್ಯಮಂತ್ರಿಗಳ ಪುರಸ್ಕಾರ ಲಭಿಸಿರುವುದು ವಿಶೇಷ.