ಯುವತಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರು

district koppal shakhi one stop center rescue operation
Published on

ಕೊಪ್ಪಳ: ಕೌಟುಂಬಿಕ ಮನಸ್ತಾಪಗಳಿಗಾಗಿ ಕುಟುಂಬ, ಮನೆ ತೊರೆದು ಕಾಲು ಮುರಿದುಕೊಂಡು ಅನಾಥ ಭಾವದಲ್ಲಿದ್ದ ಯುವತಿಗೆ ನೆರವಾದ ಸಖಿ ಒನ್​ ಸ್ಟಾಪ್​ ಸೆಂಟರ್​ ಹಾಗೂ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರದ 22 ವರ್ಷದ ಯುವತಿ ಶಿಲ್ಪಾ ಕೌಟುಂಬಿಕ ಸಮಸ್ಯೆ ಕಾರಣ ಕಾರಟಗಿಗೆ ಬಂದು ಅಜ್ಜಿಯೊಂದಿಗಿದ್ದರು. ಕುಟುಂಬದವರೊಡನೆ ವೈಮನ್ಸು ಉಂಟಾಗಿ ಬಿಟ್ಟು ಬಂದಿದ್ದಾಳೆ. ಸಾಮಾಜಿಕ ಜಾಲತಾಣ ಮೂಲಕ ಪರಿಚಿತನಾದವನೊಂದಿಗೆ ಪ್ರೀತಿಯಾಗಿ ಭೇಟಿಯಾಗಿದ್ದಾಳೆ. ಆತನಿಗೆ ಮದುವೆಯಾದ ವಿಷಯ ತಿಳಿದು ದೂರಾಗಿದ್ದಾಳೆ. ಬಳಿಕ ಬೆಂಗಳೂರು, ಧಾರವಾಡದ ಹೋಟೆಲ್​ಗಳಲ್ಲಿ ಕೆಲಸ ಮಾಡಿದ್ದಾಳೆ. ಧಾರವಾಡದಲ್ಲಿ ವ್ಯಕ್ತಿಯೊಬ್ಬರ ಕೇರ್​ ಟೇಕರ್​ ಆಗಿ ಕೆಲಸಕ್ಕೆ ಸೇರಿ ಎರಡು ತಿಂಗಳಲ್ಲಿ ಮಹಡಿ ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದಾಳೆ.

ಆಶ್ರಯ ಅರಸಿ ಗವಿಮಠಕ್ಕೆ ತೆರಳಿದ್ದು, ಅಲ್ಲಿನವರು ಸಖಿ ಟಕಕ್ಕೆ ಕಳಿಸಿದ್ದಾರೆ. ಸಖಿ ಟಕದವರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಅಗತ್ಯವಿದ್ದರೂ ಜವಾಬ್ದಾರಿ ತೆಗೆದುಕೊಳ್ಳಲು ಯಾರೋಬ್ಬರು ಮುಂದೆ ಬಾರದ ಕಾರಣ ವೈದ್ಯರು ಅಸಹಾಯಕರಾಗಿದ್ದರು. ಇಷ್ಟು ದಿನ ಚಿಕಿತ್ಸೆ ನೀಡಿಲಾಗಿದೆ. ಸಖಿ ಘಟಕದ ಸಿಬ್ಬಂದಿ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ್​ ಎಸ್​.ದರಗದ, ಜಿಲ್ಲಾಸ್ಪತ್ರೆಯ ನರರೋಗ ತಜ್ಞ ಡಾ.ವಿಜಯ್​ ಸುಂಕದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪರಶುರಾಮ್​ ಶೆಟ್ಟಪ್ಪನವರ ನೆರವು ನೀಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net