

ಕೊಪ್ಪಳ: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಹೆಚ್ಚುವರಿ ಹುದ್ದೆ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಎಸ್ಎ್ಐ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಆಕಾಂಗಳು ಪ್ರತಿಭಟನೆ ನಡೆಸಿದರು.
ಈ ವರ್ಷ 20 ಸಾವಿರ ಶಿಕ್ಷಕರು ನಿವೃತ್ತಿಯಾಗಲಿದ್ದಾರೆ. 2025ರ ವೇಳೆಗೆ 40 ಸಾವಿರ ಶಿಕ್ಷಕರು ಸೇವಾ ನಿವೃತ್ತರಾಗುವರು. ಕಕ ಭಾಗದಲ್ಲಿ ಶೇ.45.80ರಷ್ಟು ಶಿಕ್ಷಕರ ಹುದ್ದೆ ಖಾಲಿ ಇವೆ. ಇದರಲ್ಲಿ ಅರ್ಧದಷ್ಟು ಶಿಕ್ಷಕರನ್ನು ನೇಮಿಸಿಲ್ಲ. 25 ಸಾವಿರ ಶಾಲೆಗಳಲ್ಲಿ ಕೇವಲ ಒಬ್ಬೊಬ್ಬರೇ ಶಿಕ್ಷಕರಿದ್ದಾರೆ. ಸದ್ಯ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೂ 5262 ಶಿಕ್ಷಕರ ನೇಮಕಕ್ಕೆ ಮುಂದಾಗಿದೆ. ಇದರಿಂದ ಮಕ್ಕಳಿಗೆ ಪ್ರಯೋಜನವಾಗುವುದಿಲ್ಲ. 6&8ನೇ ತರಗತಿಗೆ ಕೇವಲ 78 ಶಿಕ್ಷಕರ ನೇಮಕಕ್ಕೆ ಮುಂದಾಗಿರುವುದು ಸಮಂಜಸವಲ್ಲ ಎಂದರು.
ಕನಿಷ್ಠ 10 ಸಾವಿರ ಶಿಕ್ಷಕರನ್ನು ನೇಮಿಸಬೇಕು. ಖಾಲಿ ಇರುವ ಶೇ.80ರಷ್ಟು ಹುದ್ದೆಗಳನ್ನು ಭರ್ತಿ ಮಾಡಿ. ಕಕ ಭಾಗದಲ್ಲಿ ಪ್ರಾಥಮಿಕ, ಪದವೀಧರ ಹಾಗೂ ಪ್ರೌಢ ಶಾಲಾ ಶಿಕ್ಷಕರ ಹುದ್ದೆ ಹೆಚ್ಚಿಸಬೇಕು. 2022ರಲ್ಲಿ ಉಳಿಕೆ ಸ್ಥಾನ ನೇಮಿಸಲು ಹಣಕಾಸು ಇಲಾಖೆ ಅನುಮತಿ ಅವಶ್ಯವಿಲ್ಲ. 2022&23ರಲ್ಲಿ ಹೈಸ್ಕೂಲ್ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದ್ದು ಆ ಹುದ್ದೆಗಳನ್ನು ನೇಮಿಸುವಂತೆ ಒತ್ತಾಯಿಸಿದರು. ಎಸ್ಎ್ಐ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಸಹ ಕಾರ್ಯದರ್ಶಿ ಬಾಲಾಜಿ, ಸಂಚಾಲಕರಾದ ಮಾರುತಿ, ಅಮರೇಶ ಲಿಂಗದಹಳ್ಳಿ, ಅಮರಯ್ಯ ಹಿರೇಮಠ, ಆಕಾಂಗಳಾದ ಜಗದೀಶ ಗೌಡ, ಪ್ರಸನ್ನಕುಮಾರ, ಮರಿಯಪ್ಪ ಇದ್ದರು.