ಕಾಲೇಜು ಮಾನ್ಯತೆ ರದ್ದುಪಡಿಸಲು ಎಸ್​ಎ್​ಐ ಆಗ್ರಹ

district koppal sfi protest nursing collage gangavathi
Published on

ಕೊಪ್ಪಳ: ಗಂಗಾವತಿಯ ಬಿಬಿಸಿ ಕಾಲೇಜ್​ ಆ್​ ನರ್ಸಿಂಗ್​ ಮಾನ್ಯತೆ ರದ್ದುಪಡಿಸುವಂತೆ ಒತ್ತಾಯಿಸಿ ಎಸ್​ಎ್​ಐ ಸಂಚಾಲಕರು ಗುರುವಾರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು.

ಮುಸಲಾಪುರದ ವಿದ್ಯಾರ್ಥಿನಿ ಕಾವೇರಿ ವಾಲಿಕಾರ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್​ಗೆ ಪ್ರವೇಶ ಪಡೆದಿದ್ದಾಳೆ. ಆರಂಭದಲ್ಲಿ 10 ಸಾವಿರ ರೂ. ಪಾವತಿಸಿದ್ದು, ಬಾಕಿ 90 ಸಾವಿರ ರೂ. ನೀಡಿರಲಿಲ್ಲ. ಗದಗನಲ್ಲಿ ಸರ್ಕಾರಿ ಸೀಟು ಲಭ್ಯವಾಗಿದ್ದು, ಟಿಸಿ ನೀಡುವಂತೆ ಕೇಳಿದ್ದಾರೆ. ಕಾಲೇಜು ಮುಖ್ಯಸ್ಥ ಡಾ.ಸಿ.ಬಿ.ಚಿನಿವಾಲರ ಬಾಕಿ 90 ಸಾವಿರ ರೂ. ನೀಡುವಂತೆ ಕೇಳಿದ್ದಾರೆ. ಬಡತನ ಕಾರಣ ಹಣವಿಲ್ಲವೆಂದು ಬಾಲಕಿ ಪಾಲಕರು ಮನವಿ ಮಾಡಿದ್ದಾರೆ. ಈ ವೇಳೆ ಮೈ ಮೇಲಿನ ಚಿನ್ನಾಭರಣಗಳನ್ನು ಪಡೆದು ದಾಖಲೆ ನೀಡಿದ್ದಾರೆಂದು ಆರೋಪಿಸಿದರು.

ಇದು ಅಕ್ಷಮ್ಯ ಅಪರಾಧ. ಬಡತನ ಕಾರಣ ಶುಲ್ಕ ಪಾವತಿಸಿಲ್ಲ. ಅದಕ್ಕೆ ಚಿನ್ನಾಭರಣ ಬಿಚ್ಚಿಸಿಕೊಂಡು ಕ್ರೌರ್ಯ ಮೆರೆಯಲಾಗಿದೆ. ತಕ್ಷಣ ಕಾಲೇಜು ಮಾನ್ಯತೆ ರದ್ದುಪಡಿಸಬೇಕು. ಡಾ.ಸಿ.ಬಿ.ಚಿನಿವಾಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಎಸ್​ಎ್​ಐ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಸಂಚಾಲಕರಾದ ಯಮನೂರ, ನಾಗರಾಜ, ಅಣ್ಣಪ್ಪ, ಬಸವರಾಜ, ಅಮರೇಶ, ಶರ್​ೀ, ಶಿವಕುಮಾರ, ಬಸವರಾಜ, ಹುಲುಗಪ್ಪ, ಅಮರೇಶ ಗುರಿಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net