

ಕೊಪ್ಪಳ: ಪ್ರವಾಸಕ್ಕೆ ತೆರಳಿ ಶಿಕ್ಷಕರ ರ್ನಿಲಕ್ಷ$್ಯದಿಂದ ಮೃತಪಟ್ಟ ಗಾಣಧಾಳ ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರ 20 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ಎಸ್ಎ್ಐ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. '
ಪ್ರವಾಸಕ್ಕೆ ತೆರಳಿದಾಗ ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿವಹಿಸಿಲ್ಲ. ಮೂತ್ರ ವಿಸರ್ಜನೆಗೆ ತೆರಳಿದ್ದ ವಿದ್ಯಾರ್ಥಿ ನಿರುಪಾದಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ಟನೆಗೆ ಶಾಲೆ ಮುಖ್ಯ ಶಿಕ್ಷಕ ಹಾಗೂ ಇತರ ಶಿಕ್ಷಕರು ಹೊಣೆ. ರಾಜ್ಯದಲ್ಲಿ ಇಂಥ ಟನೆಗಳು ಹೆಚ್ಚುತ್ತಿದ್ದು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ಮೃತ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಿ. ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಿಸಿ. ಎರಡು ಎಕರೆ ಭೂಮಿ ಮಂಜೂರು ಮಾಡಿ. ಶೈಕ್ಷಣಿಕ ಪ್ರವಾಸಕ್ಕೆ ಮಾರ್ಗಸೂಚಿ ರಚಿಸಿ. ಪ್ರವಾಸೋದ್ಯಮ ಇಲಾಖೆ ನಿಯಮಾನುಸಾರ ಪ್ರವಾಸ ಕೈಗೊಳ್ಳಲು ಸೂಚಿಸಲು ಆಗ್ರಹಿಸಿದರು.
ಎಸ್ಎ್ಐ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಸಂಚಾಲಕರಾದ ಅಮರೇಶ, ನಾಗರಾಜ, ಅಮರಯ್ಯ ಇತರರಿದ್ದರು.