ಕೊಪ್ಪಳ ಜಿಲ್ಲಾಡಳಿತದಿಂದ ಸಂತ ಸೇವಾಲಾಲ್​ ಜಯಂತಿ ಆಚರಣೆ

sevalal jayanthi in koppal district administration ac mahesh malagitti
ಕೊಪ್ಪಳದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಸಂತ ಸೇವಾಲಾಲ ಜಯಂತಿ ಆಚರಿಸಲಾಯಿತು. ಸಹಾಯಕ ಆಯುಕ್ತ ಕ್ಯಾ.ಮಹೇಶ್​ ಮಾಲಗಿತ್ತಿ ಹಾಗೂ ಅಬಕಾರಿ ಉಪ ಆಯುಕ್ತ ಬಿ.ಆರ್​.ಹಾಲೇಶ್​, ಅಬಕಾರಿ ಅಧೀಕ್ಷಕಿ ಭಾರತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಸಮುದಾಯದ ಮುಖಂಡರಾದ ಅಚಲಾಪುರ ತಾಂಡಾದ ಯಮನೂರಪ್ಪ, ಹನುಮಂತಪ್ಪ ಮಡ್ಡಿ ಇದ್ದರು.
Published on

ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಗುರುವಾರ ಸಂತ ಸೇವಾಲಾಲ್​ ಜಯಂತಿ ಆಚರಿಸಲಾಯಿತು.

ಸಹಾಯಕ ಆಯುಕ್ತ ಕ್ಯಾ.ಮಹೇಶ್​ ಮಾಲಗಿತ್ತಿ ಹಾಗೂ ಅಬಕಾರಿ ಉಪ ಆಯುಕ್ತ ಬಿ.ಆರ್​.ಹಾಲೇಶ್​ ಸಂತ ಸೇವಾಲಾಲ್​ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಅಬಕಾರಿ ಅಧೀಕ್ಷಕಿ ಭಾರತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಸಮುದಾಯದ ಮುಖಂಡರಾದ ಅಚಲಾಪುರ ತಾಂಡಾದ ಯಮನೂರಪ್ಪ, ಹನುಮಂತಪ್ಪ ಮಡ್ಡಿ, ಕನಕಾಪುರ ತಾಂಡಾದ ಚಂದ್ರಶೇಖರ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net