ಕೊಪ್ಪಳ: ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆ -2ರ ಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕೇವಲ ಶೇ.27.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮೊದಲ ವಾರ್ಷಿಕ ಪರೀಕ್ಷೆ ಲಿತಾಂಶ ಕೊಂಚ ಸಮಾಧಾನ ತಂದಿದ್ದರೂ ಪರೀೆ &2ರಲ್ಲಿ ಅಷ್ಟೊಂದು ಸುಧಾರಣೆ ಕಂಡಿಲ್ಲ. ಹೊಸದಾಗಿ ಪರೀಕ್ಷೆ ಬರೆದ 2,218 ಮಕ್ಕಳಲ್ಲಿ ಕೇವಲ 602 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹಳಬರು ಸೇರಿದಂತೆ 3,339 ವಿದ್ಯಾರ್ಥಿಗಳಲ್ಲಿ 757 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲೂ ಹುಡುಗಿಯರು ಹುಡುಗರನ್ನು ಹಿಂದಿಕ್ಕಿದ್ದಾರೆ. 1,788 ವಿದ್ಯಾರ್ಥಿಗಳಲ್ಲಿ 369 (ಶೇ.20.64) ಪಾಸ್ ಆದರೆ, 1,551 ವಿದ್ಯಾರ್ಥಿನಿಯರಲ್ಲಿ 388 (ಶೇ.25.02) ತೇರ್ಗಡೆ ಹೊಂದಿದ್ದಾರೆ.
784 ಆಂಗ್ಲ ಮಾಧ್ಯಮ ಮಕ್ಕಳಲ್ಲಿ 258 (ಶೇ.32.91), 2,555 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿ 499 (ಶೇ.19.53) ಉತ್ತೀರ್ಣರಾಗಿದ್ದು ಇಂಗ್ಲೀಷ್ ಮಾಧ್ಯಮದವರೇ ಅಧಿಕ ಸಂಖ್ಯೆಯಲ್ಲಿ ಪಾಸ್ ಆಗಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳು ಸಮ ಪ್ರಮಾಣದಲ್ಲಿ ಉತ್ತೀರ್ಣರಾಗಿರುವುದು ವಿಶೇಷ. 2,254 ನಗರ ಪ್ರದೇಶದವರಲ್ಲಿ 511 (ಶೇ.22.67), 1,085 ಗ್ರಾಮೀಣ ಭಾಗದವರ ಪೈಕಿ 246 (ಶೇ.22.67)ರಷ್ಟು ತೇರ್ಗಡೆ ಹೊಂದಿದ್ದಾರೆ.
ವಿಭಾಗವಾರು ಲಿತಾಂಶದಲ್ಲಿ ವಿಜ್ಞಾನ ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದ 688 ಮಕ್ಕಳಲ್ಲಿ 240 (ಶೇ.34.98), ವಾಣಿಜ್ಯ ವಿಭಾಗದ 480 ಚಿಣ್ಣರಲ್ಲಿ 93 (ಶೇ.19.38) ಹಾಗೂ 2,171 ಕಲಾ ವಿಭಾಗದ ವಿದ್ಯಾರ್ಥಿಗಳಲ್ಲಿ 424(ಶೇ.19.53) ಪಾಸ್ ಆಗಿದ್ದಾರೆ.