

ಕೊಪ್ಪಳ: ವಕ್ಫ ತಿದ್ದುಪಡಿ ಮಸೂದೆ ರದ್ದು ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಸೋಮವಾರ ಎಸ್ಡಿಪಿಐ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ವಕ್ಫ ಕಾಯ್ದೆಗೆ ತಿದ್ದುಪಡಿ ಮಾಡಿ ಹೊಸ ಮಸೂದೆ ಮಂಡಿಸಿದೆ. ಇದು ಮುಸ್ಲಿಮರಿಗೆ ಕರಾಳ ಶಾಸನವಾಗಲಿದೆ. ಇದನ್ನು ಖಂಡಿಸಿ ಎಸ್ಡಿಪಿಐ ಹಲವು ಹೋರಾಟ ರೂಪಿಸಿದೆ. ಹೋರಾಟ ದಿಕ್ಕು ತಪ್ಪಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ೈಜಿ ಅವರನ್ನು ಅಕ್ರಮ ಹಣ ವರ್ಗಾವಣೆ ಸುಳ್ಳು ಆರೋಪದಡಿ ಬಂಧಿಸಲಾಗಿದೆ. ಇದು ಕೇಂದ್ರದ ದಮನ ನೀತಿ. ಇನ್ನು ಪ್ಯಾಲಿಸ್ತಿನ್ನಲ್ಲಿ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಸಿದ್ದು ಖಂಡನೀಯ ಎಂದು ಘೋಷಣೆ ಪ್ರದರ್ಶಿಸಿ ಗಮನ ಸೆಳೆದರು. ಎಸ್ಡಿಪಿಐ ಜಿಲ್ಲಾ ಕಾರ್ಯಕರ್ತರಿದ್ದರು.