ಸಾಮಾಜಿಕ ನ್ಯಾಯಕ್ಕಾಗಿ ಜಾಥಾ

Published on

ಕೊಪ್ಪಳ: ಎಸ್​ಡಿಪಿಐ ಪಕ್ಷದಿಂದ ಸಾಮಾಜಿಕ ನ್ಯಾಯಕ್ಕಾಗಿ ಚಳೊ ಬೆಳಗಾವಿ, ಅಂಬೇಡ್ಕರ್​ ಜಾಥಾ&2 ಹಮ್ಮಿಕೊಂಡಿದ್ದು ಡಿ.14ರಂದು ಕೊಪ್ಪಳಕ್ಕೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸ್​ು ಮೋದಿ ತಿಳಿಸಿದರು.

ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಸಮುದಾಯಗಳ ಸಾಂವಿಧಾನಿಕ ಹಕ್ಕು ರಕ್ಷಣೆ, ಯೋಜನೆಗಳ ಜಾರಿಗೆ ಶ್ರಮಿಸುತ್ತಿದ್ದೇವೆ. ಕಳೆದ ವರ್ಷವೂ ವಿವಿಧ ಬೇಡಿಕೆ ಇಟ್ಟುಕೊಂಡು ಜಾಥಾ ನಡೆಸಲಾಗಿದೆ. ಡಿ.10ರಂದು ಉಡುಪಿಯಿಂದ ಜಾಥಾ ಆರಂಭವಾಗಿದೆ. ದಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ&ಧಾರವಾಡ ಮೂಲಕ ಡಿ.16ರಂದು ಬೆಳಗಾವಿ ತಲುಪಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡಿ.14ಕ್ಕೆ ಜಾಥಾ ಕೊಪ್ಪಳಕ್ಕೆ ಆಗಮಿಸಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಕೆಲವೆಡೆ ಬಹಿರಂಗ ಸಮಾವೇಶ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುವುದು. ಅಹಿಂದ ಸರ್ಕಾರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ದಲಿತ, ಅಲ್ಪಸಂಖ್ಯಾತರು, ಹಿಂದುಳಿದವ ಪರವಾಗಿ ಆಡಳಿತ ಮಾಡುತ್ತಿಲ್ಲ. ಕಣ್ಣೊರೆಸುವ ತಂತ್ರ ಮೂಲಕ ಆಡಳಿತ ಮಾಡುತ್ತಿದೆ. ಇದೆಲ್ಲವನ್ನು ಖಂಡಿಸಿ ಬೆಳಗಾವಿವರೆಗೆ ಜನಾಂದೋಲನ ಕೊಂಡೊಯ್ಯುತ್ತಿದ್ದೇವೆಂದರು.

ಪಜಾ ಪಳ ಮೀಸಲು ಜಾರಿ, ಮುಸ್ಲಿಮರ ಮೀಸಲು ಮರುಸ್ಥಾಪನೆ ಮತ್ತು ಶೇ.8ಕ್ಕೆ ಹೆಚ್ಚಳ, ಕಾಂತರಾಜ್​ ಆಯೋಗ ವರದಿ ಜಾರಿ, ವಕ್ಫ ಆಸ್ತಿ ರಕ್ಷಣೆ, ಬಿಜೆಪಿ ವಕ್ಫ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದನ್ನು ವಿರೋಧಿಸುವುದು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡಬೇಕು. ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ವಿವರಿಸಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದೀನ್​ ಮಾಳೆಕೊಪ್ಪ, ಕೊಪ್ಪಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಲಿಂ ಖಾದ್ರಿ, ಕಾರ್ಯದರ್ಶಿ ಮಹಮ್ಮದ ಸಾದಿಕ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net