

ಕೊಪ್ಪಳ: ಸೇವಾ ಮನೋಭಾವನೆ, ಶಿಸ್ತು, ಸಮಯ ಪಾಲನೆ ಕಲಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಲಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸಲಹೆ ನೀಡಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಸ್ಥೆ 2023&24ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿ ಹಂತದಲ್ಲಿ ಸ್ಕೌಟ್ಸ್, ಗೈಡ್ಸ್ ಚಟುವಟಿಕೆ ಅವಶ್ಯ. ಜಿಲ್ಲೆಯ ಶಾಲಾ&ಕಾಲೇಜುಗಳಲ್ಲಿ ಹೆಚ್ಚು ಟಕ ಸ್ಥಾಪಿಸಿ. ಈಗಿರುವ ಟಕಗಳಿಗೆ ನಿಯಮಿತವಾಗಿ ಕ್ಯಾಂಪ್ ಮಾಡಿ. ಜಿಲ್ಲೆಯ ಐತಿಹಾಸಿಕ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ. ಇತಿಹಾಸ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಮೂಡಿಸುವ ಕೆಲಸ ಮಾಡಿ. ಎಲ್ಲ ವಿದ್ಯಾರ್ಥಿಗಳು ಕ್ಯಾಂಪ್ಗಳಲ್ಲಿ ಭಾಗವಹಿಸುವಂತಾಗಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಸಕ್ರಿಯವಾಗಿ ಭಾಗಿಯಾಗಿ. ಪ್ರಮುಖ ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳು ಸ್ವಯಂ ಪ್ರೇರಣೆಯಿಂದ ಭಾಗಿಯಾಗಬೇಕು. ಉತ್ತಮ ತರಬೇತಿ, ಸಮವಸ್ತ್ರ ಒದಗಿಸಿ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಹಕಾರ ನೀಡಿ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಚ್.ಎಂ.ಸಿದ್ದರಾಮಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ 82 ಕಬ್, 49 ಫ್ಲಾಕ್, 334 ಸ್ಕೌಟ್ಸ್, 258 ಗೈಡ್ಸ್, 66 ರೋರ್ಸ್, 29 ರೇಂರ್ಸ್ ಒಟ್ಟು 818 ಸದಸ್ಯರಿದ್ದಾರೆಂದು ಮಾಹಿತಿ ನೀಡಿದರು. ಸ್ಕೌಟ್ಸ್ & ಗೈಡ್ಸ್ ಧ್ವಜ ಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜ ಚೀಟಿ ಬಿಡುಗಡೆ ಮಾಡಲಾಯಿತು. ಸಭೆ ಬಳಿಕ ಸ್ವಚ್ಛತಾ ಮತ್ತು ಆರೋಗ್ಯ ಜಾಗೃತಿ ಜಾಥಾಕ್ಕೆ ಡಿಸಿ ಚಾಲನೆ ನೀಡಿದರು.
ಡಿಡಿಪಿಯು ಜಗದೀಶ ಎಚ್., ಡಿಡಿಪಿಐ ಶ್ರೀಶೈಲ ಬಿರಾದಾರ, ವಾರ್ತಾಧಿಕಾರಿ ಡಾ.ಸುರೇಶ ಜಿ., ಜಿಲ್ಲಾ ಗೈಡ್ಸ್ ಆಯುಕ್ತೆ ಅರುಣಾ ವಸ್ತ್ರದ, ಸ್ಕೌಟ್ಸ್&ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ, ಖಜಾಂಚಿ ಪ್ರಹ್ಲಾದ್ ಬಡಿಗೇರ, ಜಂಟಿ ಕಾರ್ಯದರ್ಶಿ ದಾಾಯಣಿ ಬಂಡಿ ಇತರರಿದ್ದರು.