ಪಠ್ಯದೊಂದಿಗೆ ಚಟುವಟಿಕೆ ಇರಲಿ

district koppal science center students visit
Published on

ಕೊಪ್ಪಳ: ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು, ನೃತ್ಯ, ಕರಾಟೆ, ಯೋಗ ಇನ್ನಿತರ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಓದಿನೊಂದಿಗೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಮುಖ್ಯ. ಈ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿ. ಇದರಿಂದ ನಿಮಮ್ಲಲಿನ ಸೃಜನಶೀಲತೆ ಹೊರಬರಲಿದೆ ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ ಮಾತನಾಡಿ, ಮಕ್ಕಳು ಶಿಬಿರದಲ್ಲಿ ಹೆಚ್ಚು ಭಾಗಿಯಾಗಿ. ಇಲ್ಲಿ ಕಲಿಸುವ ಚಟುವಟಿಕೆಗಳನ್ನು ಗಮನವಿಟ್ಟು ಕಲಿಯಿರಿ. ನೀವು ರಚಿಸಿದ ಆಟಿಕೆಗಳನ್ನು ಪ್ರದರ್ಶಿಸಿ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ನಿರೂಪಣಾಧಿಕಾರಿ ಗಂಗಪ್ಪ, ಸಿಡಿಪಿಒಗಳಾದ ರೋಹಿಣಿ ಕೊಟಗಾರ, ಬೆಟ್ಟದೇಶ ಮಾಳೆಕೊಪ್ಪ, ಜಯಶ್ರೀ ಆರ್​., ಯಲ್ಲಮ್ಮ ಹಂಡಿ, ವಿರುಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net